ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್ 3 ದಿನ ಪೊಲೀಸ್ ಕಸ್ಟಡಿಗೆ

0
Spread the love

ನೀರಿನ ಹೊಂಡಕ್ಕೆ ಸೋಡಿಯಂ ಮೆಟಲ್ ಎಸೆದು ಬ್ಲಾಸ್ಟ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡದ ಮಾಜಿ ಬಿಗ್ ​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ನನ್ನು ಮಧುಗಿರಿ ಕೋರ್ಟ್ ಮೂರು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

Advertisement

ನಿನ್ನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್​ನನ್ನು ಬಂಧಿಸಿದ್ದರು. ಡಿ.12ರಂದು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದು ಬಳಿಕ ಡಿ.13ರಂದು ಮಧುಗಿರಿಯ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ಕೋರ್ಟ್​ಗೆ ಹಾಜರು ಪಡಿಸಿದರು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ಡ್ರೋನ್ ಪ್ರತಾಪ್​ನನ್ನು ಮೂರು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.

ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಡ್ರೋಣ್ ಪ್ರತಾಪ್ ಸ್ಫೋಟಿಸಿದ್ದರು. ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪೊಲೀಸರು ವಿಡಿಯೋ ಆಧರಿಸಿ ಪ್ರತಾಪ್, ಜಮೀನಿನ ಮಾಲೀಕ ಜಿತೇಂದ್ರ ಜೈನ್​ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್‌ಪಿಸಿ 158 ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡ್ರೋನ್ ಪ್ರತಾಪ್​ ಸೋಡಿಯಂ ಸ್ಫೋಟಕ ಎಸೆದಿದ್ದ ಪ್ರಕರಣದ ಬಗ್ಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಪ್ರತಿಕ್ರಿಯಿಸಿ, ಡ್ರೋನ್ ಪ್ರತಾಪ್ ವಿರುದ್ಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್​ ದಾಖಲಿಸಲಾಗಿದೆ. ಡ್ರೋನ್​ ಪ್ರತಾಪ್ ಕೆಮಿಕಲ್ ಬಳಸಿ ಸ್ಫೋಟಿಸಿ ಬಳಿಕ ಯೂಟ್ಯೂಬ್​ಗೆ ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​​ನನ್ನ 3 ದಿನ ಕಸ್ಟಡಿಗೆ ಪಡೆಯಲಾಗಿದ್ದು, ಹಳೇ ವಿಡಿಯೋ ಏನಾದ್ರೂ ಇದ್ಯಾ ಎಂದು ಪರಿಶೀಲಿಸಲಾಗುತ್ತೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here