ಸೈನಿಕರೇ ದೇಶದ ದೊಡ್ಡ ಶಕ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಗೈದ ಪಾಕಿಸ್ತಾನಿ ಉಗ್ರಗಾಮಿಗಳ ನೆಲೆಗಳ ಮೇಲೆ ಅಪರೇಷನ್ ಸಿಂಧೂರ ಮೂಲಕ ಯಶಸ್ವಿ ಕಾರ್ಯುಚರಣೆ ನಡೆಸಿದ ಭಾರತೀಯ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಾಜಿ ಸೈನಿಕರು ಮತ್ತು ಗ್ರಾಮಸ್ಥರಿಂದ ಡಂಬಳದಲ್ಲಿ ಬೃಹತ್ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.

Advertisement

ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಿಂದ ಪ್ರಾರಂಭವಾದ ತಿರಂಗಾ ಯಾತ್ರೆಗೆ ಹರ್ಲಾಪುರದ ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಗದಗ, ಮುಂಡರಗಿ, ಡಂಬಳ ಭಾಗದ 40ಕ್ಕೂ ಹೆಚ್ಚು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಭಿನವ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಉತ್ತಮ ಸಂಸ್ಕಾರ, ಸಂಸ್ಕೃತಿ, ಆದರ್ಶಗಳನ್ನು ಹೊಂದಿರುವ, ವೀರ ಪರಂಪರೆಯುಳ್ಳ ದೇಶ ನಮ್ಮದು. ನಮ್ಮ ಸೈನಿಕರೇ ದೇಶದ ದೊಡ್ಡ ಶಕ್ತಿಯಾಗಿದ್ದಾರೆ ಎಂದರು.

ಮಾಜಿ ಸೈನಿಕ ವಾಸಪ್ಪ ಕಾಶಭೋವಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಜಿ.ವಿ. ಹಿರೇಮಠ, ಭೀರಪ್ಪ ಬಂಡಿ, ಕೃಷ್ಣಾ ಬಂಡಿ, ಕುಬೇರಪ್ಪ ಬಂಡಿ, ರಾಗು ಹಡಪದ, ಯಮನೂರ ದೊಡ್ಡಮನಿ, ನಿಂಗಪ್ಪ ಮಾದರ, ರವಿ ಕರಿಗಾರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ವೆಂಕನಗೌಡ ಪಾಟೀಲ, ನಾಗರಾಜ ಕಾಟರಳ್ಳಿ, ರಾಜೇಶ ಅರಕಲ್ಲ, ಗವಿಯಪ್ಪ ಮಠದ, ಸಿದ್ದನಗೌಡ ಪಾಟೀಲ, ಪ್ರಭು ಕರಮುಡಿ, ಪಂಚಾಕ್ಷರಯ್ಯ, ಮುತ್ತನಗೌಡ ಚಿನ್ನಪ್ಪಗೌಡರ, ಬಸುರಾಜ ಚೆನ್ನಳ್ಳಿ, ಶಿವು ಬಂಡಿ, ಈಶ್ವರಗೌಡ ಪಾಟೀಲ, ಉಮೇಶಗೌಡ ಹಿರೇಗೌಡರ, ಸುರೇಶ ಚವ್ಹಾಣ, ಪ್ರಕಾಶ ಕೋತಂಬ್ರಿ, ಈಶಪ್ಪ ರಂಗಪ್ಪನವರ, ಲಕ್ಷ್ಮಣ ಬೂದಿಹಾಳ, ಹನಮಂತ ಪೂಜಾರ, ಅಮರೇಶ ಸಂಗನಾಳ, ಸೋಮಶೇಖರಯ್ಯ ಹಿರೇಮಠ, ಮುದಕಪ್ಪ ತಳಕಲ್ಲ, ಮುತ್ತಪ್ಪ ರೋಣದ, ಬಸುರಾಜ ಈಟಗಿ, ಮಲ್ಲೇಶ ಪೂಜಾರ, ಪ್ರಮೋದ ನಾಡಗೌಡರ, ವಾಸುದೇವ ಪಾಟೀಲ, ಪಿ.ಡಿ. ಪಾಟೀಲ, ಮುತ್ತಜ್ಜ ಹಿರೇಮಠ, ನಾಗರಾಜ ನವಲಿ, ಫಕೀರಪ್ಪ ಉಳ್ಳಾಗಡ್ಡಿ, ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಡಂಬಳ ಹೋಬಳಿಯ ಗ್ರಾಮದ ಹಿರಿಯರು, ಯುವಕರು ಇದ್ದರು.

ಅಂದಪ್ಪ ಹಾರೂಗೇರಿ ಮಾತನಾಡಿ, ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನಕ್ಕೆ ನಮ್ಮ ಹೆಮ್ಮೆಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳನ್ನು, ತರಬೇತಿ ಶಿಬಿರಗಳನ್ನು ಭಾರತೀಯ ಸೇನಾಪಡೆ ನಾಶಗೊಳಿಸಿರುವುದು ದೇಶದ ಜನತೆ ಎಂದೂ ಮರೆಯ ಕಾರ್ಯವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here