ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡೋರನ್ನ ಕೆಲ ಸಂಘಟನೆಗಳು ರಕ್ಷಣೆ ಮಾಡ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಚೋದನಕಾರಿ ಭಾಷಣ ಮಾಡೋರನ್ನ ಕೆಲ ಸಂಘಟನೆಗಳು ರಕ್ಷಣೆ ಮಾಡ್ತಿದೆ.
Advertisement
ಅವರಿಗೆ ಲಾಯಾರ್ಸ್ ಕೊಡ್ತಾರೆ, ಜಡ್ಜಸ್ ಹತ್ತಿರ ಮಾತನಾಡಿಸ್ತಾರೆ. ಫ್ಐಆರ್ ಆದರೂ ಅವರಿಗೆ ಸುಲಭವಾಗಿ ಬೇಲ್ ಸಿಗ್ತಾ ಇದೆ ಇಂತಹ ಕೆಲಸಗಳು ನಿಲ್ಲಬೇಕು ಎಂದು ಹೇಳಿದ್ದಾರೆ.
ಎಲ್ಲ ಕಾನೂನು ಬಾಹಿರ ಚಟುವಟಿಕೆಗೆ ಇತಿಶ್ರೀ ಹಾಡುತ್ತೇವೆ. ಏನು ಮಾಡಬೇಕು ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಕೋಮುಗಲಭೆ, ಕೋಮುಭಾವನೆಯನ್ನ ಕೆರಳಿಸುವವರು ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾದವರು ಆಗಿದ್ದಾರೆ. ಯಾವುದೇ ಸಂಘಟನೆಯನ್ನ ಬ್ಯಾನ್ ಮಾಡೋದಕ್ಕೆ ನಮಗೆ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.