ಬರ್ತಡೇ ದಿನವೇ ಮಗ ಸಾವು: ಹೆಣದ ಕೈ ಹಿಡಿದು ಕೇಕ್‌ ಕತ್ತರಿಸಿ, ಅಂಗಾಂಗ ದಾನ ಮಾಡಿದ ಪೋಷಕರು!

0
Spread the love

ಕೊಪ್ಪಳ:- ಕಳೆದ 15 ದಿನಗಳ ಹಿಂದೆ ಬೈಕ್ ಅಪಘಾತಕ್ಕೀಡಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ತನ್ನ ಹುಟ್ಟುಹಬ್ಬವಾದ ಶುಕ್ರವಾರ (24 ರಂದು) ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಗ ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ್ದು, ಪೋಷಕರು ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಆರ್ಯನ್ (22) ಮೃತ ಯುವಕ. ಈತ ಕೊಪ್ಪಳದ ಕನಕಗಿರಿ ಮೂಲದವ ಎನ್ನಲಾಗಿದೆ.

15 ದಿನಗಳ ಹಿಂದೆ ಹಾಸನದ ಸಮೀಪ ಬೈಕ್ ಅಪಘಾತಕ್ಕೊಳಗಾಗಿ, ಆರ್ಯನ್‌ ಗಾಯಗೊಂಡಿದ್ದ. ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಹುಟ್ಟುಹಬ್ಬದ ದಿನವೇ ಯುವಕ ಸಾವನ್ನಪ್ಪಿದ್ದಾನೆ.

ಮೃತಪಟ್ಟ ಮಗನ ಕೈ ಹಿಡಿದು ಪೋಷಕರು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇಂದು ಕೊಪ್ಪಳದ ಕನಕಗಿರಿಯಲ್ಲಿ ಆರ್ಯನ್ ಅಂತ್ಯಕ್ರಿಯೆ ನಡೆದಿದೆ..


Spread the love

LEAVE A REPLY

Please enter your comment!
Please enter your name here