ಅನುರೂಪಳಾದ ಭುವನೇಶ್ವರಿ ದೇವಿ
ವಿಶ್ವನಾಥ ದತ್ತರ ಒಲವಿನ ಸ್ಪೂರ್ತಿ
ಮಕರ ಸಂಕ್ರಾಂತಿಯ ತೇಜಸ್ವಿಮೂರ್ತಿ
ನರೇಂದ್ರನಾಥರು
ಸ್ವಾಮಿವಿವೇಕಾ ನಂದರಾದ ಕೀರ್ತಿ (1)
ಬಾಲ್ಯದಲ್ಲಿ ಅಪಾರವಾದ ಪಾಂಡಿತ್ಯ
ಭಾಷಣ, ಹಾಡು, ಕುಸ್ತಿ, ಪಠಣ ಸಾಹಿತ್ಯ
ಹಲವು ಭಾಷಾ, ಪುರಾಣ ಶಾಸ್ತ್ರೀಯ ಸಂಗೀತ
ಆಧ್ಯಾತ್ಮಿಕ ಅರುಣೋದಯದ ಈ ಧೀಮಂತ (2)
ಆದರ್ಶ, ಶಿಸ್ತು, ಸ್ವಯಂ, ವಿಧೇಯತೆ, ಸಂಜ್ಞಾನ, ಕಾಯಕಪ್ರಜ್ಞೆ, ಪ್ರಾಮಾಣಿಕತೆ
ಶಿವನಾಮಸ್ಮರಣೆ, ಜ್ಞಾನ,
ಯೋಗ ಏಕಾಗ್ರತೆ
ಯುವ ಶಕ್ತಿಯ ಸರ್ವಾಂಗೀಣದ ಜಾಗೃತಿ (3)
ದೇಶದ ಸಂಚಾರಿಯಾಗಿ ಉಪದೇಶಾಮೃತ
ಸನಾತನ ಧರ್ಮ ವಿಶ್ವಕೆಲ್ಲ ವಿಸ್ತೃತ
ಸ್ವಾಮಿ ವಿವೇಕಾನಂದರ
ಈ ದಿಟ್ಟ ಆಕೃತಿ
ಭಾರತದ ಸಂಸ್ಕೃತಿಯು ಜಗಕ್ಕೆಲ್ಲ ಪ್ರಖ್ಯಾತಿ (4)
ಜಾಸತ್ಯೆ ವರ್ಣಂ, ಜಾಸತ್ಯೆ ಮರಣ ಧೃವಂ
ಧರ್ಮದ ಪುನರುಜ್ಜೀವನಕ್ಕಾಗಿ ಸದಾ ಸಿದ್ಧಂ
ಅಲ್ಪ ಆಯುಷ್ಯದ ಈ ಯುವ ಗುರೂಜಿ
ದೇಶದ ಭ್ರಾತೃತ್ವದ ಸಂದೇಶ ಸಾರಿದ ಗುರೂಜಿ
ಭುವನೇಶ್ವರಿ ದೇವಿಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದ ಜಿ
– ಕುಮಾರಿ ಸುವರ್ಣ ಮಾಳಗಿಮನಿ.
ಬಂಕಾಪುರ.