HomeCrime Newsಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಕಣ್ಣೀರು ಹಾಕಿದ ಮಗ ವಿನೀಶ್

ಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಕಣ್ಣೀರು ಹಾಕಿದ ಮಗ ವಿನೀಶ್

For Dai;y Updates Join Our whatsapp Group

Spread the love

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಖ್ಯಾತ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಪ್ರಕರಣದ ಎಲ್ಲಾ 17 ಆರೋಪಿಗಳೂ ಕಂಬಿ ಹಿಂದಿದ್ದಾರೆ. 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ಭದ್ರತಾ ದೃಷ್ಟಿಯಿಂದ 4 ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಮಧ್ಯೆ ಜೈಲಿನಲ್ಲಿರುವ ದರ್ಶನ್ ಅವರನ್ನು ಕುಟುಂಬದವರು ಮೂರು ಬಾರಿ ಭೇಟಿ ಮಾಡಿದ್ದಾರೆ.

ಕುಟುಂಬದವರು ಕಾರಿನಲ್ಲಿಯೇ ನೇರವಾಗಿ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟರು. ದರ್ಶನ್ ಗಾಗಿ ಬ್ಯಾಗ್ ನಲ್ಲಿ ಬಟ್ಟೆಗಳು, ಹಣ್ಣುಗಳು ಸೇರಿದಂತೆ ದೊಡ್ಡದಾದ ಕ್ರೇಟ್ ನಲ್ಲಿ ಕೆಲ ಸ್ನ್ಯಾಕ್ಸ್ ಫುಡ್ ತರಲಾಗಿತ್ತು. ಆದ್ರೆ ಜೈಲಿನ ಒಳಗೆ ಸ್ನ್ಯಾಕ್ಸ್ ಫುಡ್ಗೆ ಅವಕಾಶ ಇಲ್ಲದ ಹಿನ್ನೆಲೆ ಚೆಕ್ ಪೋಸ್ಟ್ ನಲ್ಲಿಯೇ ಪೊಲೀಸರು ತಡೆದು ವಾಪಸ್ ಕಳುಹಿಸಿದ್ರು.

ಬಟ್ಟೆಯ ಬ್ಯಾಗ್ ಮತ್ತು ಹಣ್ಣುಗಳನ್ನ ಮಾತ್ರ ದರ್ಶನ್ ಅಕ್ಕನ ಮಗ ಜೈಲಿನ ಒಳಗೆ ಕೊಂಡೊಯ್ದರು. ಭದ್ರತಾ ವಿಭಾಗದ ಬ್ಯಾರಕ್ ಕೊಠಡಿಯಲ್ಲಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ನೋಡುತ್ತಿದ್ದಂತೆ ಮಂದಹಾಸದಿಂದಲೇ ಮಗನನ್ನು ಅಪ್ಪಿಕೊಂಡರು‌. ಆದ್ರೆ ತಂದೆಯ ಈವೊಂದು ಸ್ಥಿತಿಯನ್ನ ಕಂಡ ದರ್ಶನ್ ಪುತ್ರ ತಂದೆಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದು, ಈ ವೇಳೆ ದರ್ಶನದ ಬಾವುಕರಾಗಿ ಮೌನವಾಗಿ ಕುಳಿತಿದ್ರು ಎನ್ನಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!