ವಿಜಯಸಾಕ್ಷಿ ಸುದ್ದಿ, ಡಂಬಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮರ ನೇತೃತ್ವದ ಸರಕಾರದಲ್ಲಿ ಈಗಾಗಲೇ ಹಿಂಗಾರು ಹಂಗಾಮಿನ ಬಿತ್ತನೆಗಾಗಿ ರೈತರಿಗೆ ಬೀಜ, ಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂಗಾರು ಹಂಗಾಮಿನಲ್ಲಿ ರೈತರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಅಗತ್ಯ ಕ್ರಮಗಳನ್ನು ರೋಣ ಕ್ಷೇತ್ರದಾದ್ಯಂತ ಕೈಗೊಳ್ಳಲಾಗಿದೆ. ರೈತರು ಆಧುನಿಕ ಮಾದರಿಯ ತಾಂತ್ರಿಕತೆಗೆ ಆದ್ಯತೆ ನೀಡಲು ಮುಂದಾಗಬೇಕು. ಡಂಬಳ ಗ್ರಾಮದ ಎಪಿಎಂಸಿ ಅಭಿವೃದ್ಧಿಯ ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಇಲ್ಲಿಯೇ ಖರೀದಿಸುವ ಕೆಲಸವಾಗಬೇಕು. ಇದಕ್ಕಾಗಿ 5 ಕೋಟಿ ರೂ ಅನುದಾನವನ್ನು ಹಾಕಲಾಗಿದೆ. ಡಂಬಳ ಸೇರಿದಂತೆ ವಿವಿಧ ಗ್ರಾಮದಲ್ಲಿರು ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಕ್ರಮವಹಿಸುತ್ತೇವೆ ಎಂದು ಹೇಳಿದರು.
ಕೃಷಿ ಉಪನಿರ್ದೇಶಕಿ ಸ್ಪರ್ತಿ ಜಿ.ಎಸ್ ಮಾತನಾಡಿ 2024-25ನೇ ಸಾಲಿನ 620ಕ್ವಿಂಟಾಲ ಬೀಜಗಳ ಸಂಗ್ರಹ ಮಾಡಲಾಗಿದೆ ಪ್ರತಿ ರೈತರಿಗೆ 5 ಎಕರೆ ವರೆಗೆ ಬೀಜಗಳನ್ನು ವಿತರಿಸಲಾಗುವುದು. ಸರಕಾರದಿಂದ ಬೀಜಗಳ ಗುಣಮಟ್ಟದ ಪರಿಶೀಲನೆ ಮಾಡಲಾಗಿದೆ.ರೈತರು ಬಿತ್ತನೆ ಮಾಡುವಾಗ ಬೀಜೋಪಚಾರ ಮಾಡಿಯೆ ಬಿತ್ತನೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಮಹೇಶ ಗಡಗಿ, ಇಒ ವಿಶ್ವನಾಥ ಹೊಸಮನಿ, ಜಾಕೀರ ಮೂಲಿಮನಿ, ಬಸುರಾಜ ಪೂಜಾರ, ಮಾರುತಿ ಹೊಂಬಳ, ಕಾಶಣ್ಣ ಹೊನ್ನುರ, ಕಾಶಪ್ಪ ಅಳವುಂಡಿ, ಪುಲಕೇಶಗೌಡ ಪಾಟೀಲ್, ಸುರೇಶ ಮೇಗಲಮನಿ, ಹಾಲಪ್ಪ ಹರ್ತಿ, ಕುಬೇರ ನಾಯಕ, ಧರ್ಮಸಿಂಗ, ಬಾಬು ಮೂಲಿಮನಿ, ಕುಬೇರಪ್ಪ ಕೊಳ್ಳಾರ, ನಾಗೇಶಭಟ್ಟ ಧರ್ಮಾದಿಕಾರಿ, ಶಾಹಿಲ್ ಜಿಗಳೂರ, ಸಹಾಯಕ ಕೃಷಿ ನಿರ್ದೇಕ ಪ್ರಾಣೇಶ, ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಎಸ್.ಬಿ. ರಾಮೇನಳ್ಳಿ, ತಾಲೂಕಾ ತಾಂತ್ರಿಕ ಸಹಾಯಕರು ಗೌರಿಶಂಕರ ಸಜ್ಜನ, ಕೃಷಿ ಅಧಿಕಾರಿಗಳಾದ ಶಿವಮೂರ್ತಿ ನಾಯಕ, ಹನಮಂತಪ್ಪ, ರಾಜೇಶ ಪೂಜಾರ, ಎನ್.ಬಿ. ಹೊಸಳ್ಳಿ, ಡಿ.ಡಿ. ಸೊರಟೂರ, ಅಕ್ಕಮಹಾದೇವಿ ಮುಂತಾದವರಿದ್ದರು.
ತಹಸೀಲ್ದಾರ ಎರಿಸ್ವಾಮಿ ಪಿ.ಎಸ್ ಮಾತನಾಡಿ, ದೇಶದ ಬೆನ್ನಲುಬಾದ ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ವಿತರಿಸುವ ಪ್ರಮಾಣೀಕೃತ ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದರು.