ಕೋಲಾರ:- ಭೀಮಾ ಸಿನಿಮಾ ಸ್ಟೈಲ್ ನಲ್ಲಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಎಸ್ಪಿ ನಿಖಿಲ್ ಮುಂದಾಗಿದ್ದಾರೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಹಾಗೂ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೋಲಾರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಕೋಲಾರದ ವಿವಿಧೆಡೆಯಿಂದ ಸುಮಾರು 120 ಮಂದಿ ಯುವಕರನ್ನು ನಗರದ ಪೊಲೀಸ್ ಭವನಕ್ಕೆ ಕರೆಸಿ ಪೊಲೀಸರು ವಿಚಾರಣೆ ನಡೆಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಾದಕ ವಸ್ತು ಬಳಕೆಯಾಗುತ್ತಿರುವ ಜಾಗವನ್ನು ಗುರುತಿಸಿ ಮಾದಕ ವಸ್ತು ಸೇವನೆ ಮಾಡುವ ಯುವಕರನ್ನು ಕರೆತಂದು ಪರೀಕ್ಷೆ ಮಾಡಲಾಗಿದೆ.
ಪಾಸಿಟಿವ್, ನೆಗೆಟಿವ್ ಎಷ್ಟಿದೆ ಎಂಬುದನ್ನು ಪರಿಶೀಲಿಸಿದ ವೇಳೆ ಕೆಲವರಲ್ಲಿ ಪಾಸಿಟಿವ್ ಬಂದಿದೆ. ಯಾರ ಮೇಲೆ ಅನುಮಾನ ಬರುತ್ತದೆಯೋ ಅಂಥವರನ್ನು ಕರೆತಂದು ಪೊಲೀಸರು ಪರೀಕ್ಷೆ ಮಾಡಿಸಿದ್ದಾರೆ.
ಯಾರ ಜೊತೆ ಮಾತನಾಡುತ್ತಾರೆ, ಏಕೆ ಮನೆಗೆ ತಡವಾಗಿ ಬರುತ್ತಾರೆ ಎಂಬುದನ್ನು ಪೋಷಕರು ಗಮನಿಸಬೇಕೆಂದು ಎಸ್ಪಿ ನಿಖಿಲ್ ಹೇಳಿದ್ದಾರೆ.



