ವಿಜಯಸಾಕ್ಷಿ ಸುದ್ದಿ, ಗದಗ : ಶಹರ ವಲಯದ ಅಕ್ಷರ ಟೆಕ್ನೊ ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಗುಬ್ಬಚ್ಚಿ ಚಿಕ್ಕ ಪಕ್ಷಿಯಾದರೂ, ಪರಿಸರ ಸಮತೋಲನಕ್ಕೆ ಅತ್ಯವಶ್ಯ.
Advertisement
`ಗುಬ್ಬಚ್ಚಿಯನ್ನು ಪ್ರೇಮಿಸೋಣ’ ಎಂಬ ಘೋಷವಾಕ್ಯದೊಂದಿಗೆ, ಬೊಂಬಿನಲ್ಲಿ ತಯಾರಿಸಿದ ಗುಬ್ಬಚ್ಚಿ ಗೂಡನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕ ವಿಜಯಕುಮಾರ್ ಹಾಲಮಠ ವಹಿಸಿದ್ದರು. ಈ ಮುಖ್ಯ ಅತಿಥಿಗಳಾಗಿ ಗದಗ ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಮೇಶ ಶಿಗ್ಲಿ, ಪಕ್ಷಿ ತಜ್ಞ ಕಿರಣ್ ಕಮ್ಮಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಮಂಗಳೂರು, ಧನಲಕ್ಮೀ ಹಾಲಮಠ, ಲಯನ್ಸ್ ಕ್ಲಬ್‌ನ ಮಹಿಳಾ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.