ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತಿ ಭಾನುವಾರ ದಿನದಂದು ದಿ:27-07-2025 ರಿಂದ ದಿ:24-08-2025 ರವರೆಗೆ ಗದಗ-ಸಿಗಂದೂರು ( ಶ್ರೀ ಚೌಡೇಶ್ವರಿ ದೇವಸ್ಥಾನ) ಹಾಗೂ ಗದಗ-ಜೋಗ ಜಲಪಾತ ಪ್ರವಾಸಿ ತಾಣಗಳಿಗೆ ವಾಕರಸಾ ಸಂಸ್ಥೆ ಗದಗ ವಿಭಾಗದಿಂದ ವಿಶೇಷ ವಾಹನ (ಪ್ಯಾಕೇಜ್ ಟೂರ್) ಕಾರ್ಯಾಚರಣೆಗೊಳಿಸಲಾಗುತ್ತಿದೆ. ( ಶಕ್ತಿ ಯೋಜನೆ ಅನ್ವಯಿಸುವುದಿಲ್ಲಾ) ಈ ಸಾರಿಗೆ ವ್ಯವಸ್ಥೆಯ ಸದುಪಯೋಗಪಡೆದುಕೊಳ್ಳಬೇಕೆಂದು ಗದಗ ವಾ.ಕ.ರ.ಸಾ.ಸಂಸ್ಥೆಯ ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement


