ಅಡರಕಟ್ಟಿ ಸಹಕಾರ ಸಂಘ ಜಿಲ್ಲೆಗೆ ಮಾದರಿ:ಶಿವಕುಮಾರಗೌಡ ಪಾಟೀಲ

0
Special Cooperative Training Workshop
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಸಹಕಾರ ಇಲಾಖೆ, ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರ ಅಡರಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಜರುಗಿತು.

Advertisement

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಅಡಕರಕಟ್ಟಿ ಪ್ಯಾಕ್ಸ್ ಸಹಕಾರ ಸಂಘದಲ್ಲಿ ಬರಗಾಲದಲ್ಲಿಯೂ ಕೂಡಾ 12 ಕೋಟಿ ರೂಪಾಯಿಗಳಷ್ಟು ಡಿಪಾಜಿಟ್ ಹೊಂದಿದೆ. 25 ವರ್ಷಗಳಿಂದ ರೈತರಿಗೆ ಶೇ.8 ಡಿವಿಡೆಂಡ್ ಕೊಡುತ್ತಾ ಬಂದಿದ್ದು, ಗದಗ ಜಿಲ್ಲೆಗೆ ಮಾದರಿಯಾಗಿದೆ. ಸಂಘದಲ್ಲಿ ರೈತರಿಗೆ ಬೇಕಾಗುವ ಕೃಷಿ ಪರಿಕರ, ಗೊಬ್ಬರ, ಬೀಜಗಳನ್ನು ಸಕಾಲಕ್ಕೆ ಒದಗಿಸುತ್ತಾ ಬಂದಿದೆ. ನಮ್ಮ ದೇಶದಲ್ಲಿ ಸಹಕಾರ ಚಳವಳಿ ಗ್ರಾಮೀಣರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹಳೇಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವ್ಹಿ. ಪಾಟೀಲ ಮಾತನಾಡಿದರು. ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಂತೇಶ ಬಿ.ಹವಳದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ವ್ಹಿ. ಪಾಟೀಲ, ಎಚ್.ಎ. ಬಂಡೆಣ್ಣವರ, ಬಿ.ಆರ್. ನಿಡಗುಂದಿ, ಕೆ.ಸಿ. ಕೂಸನೂರಮಠ, ವಿ.ವಿ. ಪಡಸಲಗಿ, ವಿಶ್ವನಾಥ ಎಚ್.ಲಮಾಣಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿನಾಯಕ ಎಚ್.ನಿರಂಜನ್, ಡಾ. ಪ್ರವೀಣ ಕರಿಕಟ್ಟಿ, ವ್ಹಿ.ಜಿ. ಕುಲಕರ್ಣಿ ಉಪನ್ಯಾಸ ನೀಡಿದರು. ಚಂದ್ರಶೇಖರ ಕರಿಯಪ್ಪನವರ, ನಿಂಗನಗೌಡ ಪಾಟೀಲ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here