HomePolitics Newsಮತದಾನ ಹೆಚ್ಚಳಕ್ಕೆ ವಿಶಿಷ್ಠ ಪ್ರಯತ್ನ

ಮತದಾನ ಹೆಚ್ಚಳಕ್ಕೆ ವಿಶಿಷ್ಠ ಪ್ರಯತ್ನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಂಡರಗಿ ತಾಲೂಕಾ ಸ್ವೀಪ್ ಸಮಿತಿ ತಾಲೂಕಿನಾದ್ಯಂತ ಮತದಾನ ಪ್ರಮಾಣದ ಹೆಚ್ಚಳದ ಗುರಿ ಹೊಂದಿದ್ದು, ಮತದಾರರನ್ನು ಹೆಚ್ಚು ಸೆಳೆಯುವ ದೃಷ್ಟಿಯಿಂದ ಡಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ 232, 233ರಲ್ಲಿ ವಿಭಿನ್ನ ಕಲಾಕೃತಿಗಳನ್ನು ಚಿತ್ರಿಸಿ ಅಲಂಕರಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಂಬಳ ಗ್ರಾಮದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಅದಕ್ಕಾಗಿ ಕಲಾಕೃತಿಗಳನ್ನು ಬಿಡಿಸುವ ಮೂಲಕ ಮತದಾನ ಪ್ರಮಾಣದ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ.

`ನನ್ನ ಮತ ನನ್ನ ಆಯ್ಕೆ, ನಿಮ್ಮ ಮತ ನಿಮ್ಮ ಧ್ವನಿ’ ಎಂಬ ಘೋಷಣೆಗಳನ್ನು ಬರೆಯಿಸುವ ಮೂಲಕ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಗಳು ಜಾಗೃತಿ ಮೂಡಿಸುತ್ತಿವೆ.

voting

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಸಂಘಟಿಸುವುದು ದೊಡ್ಡ ಕೆಲಸವಾಗಿದೆ. ಮತದಾರರ ಜಾಗೃತಿಗಾಗಿ ಚುನಾವಣಾ ಆಯೋಗ ಹಲವು ಜಾಗೃತಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿ ವಿಶಿಷ್ಟ ಯೋಚನೆ ಮೂಲಕ ಕಲೆಯನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ.

ಮತದಾರರನ್ನು ಸೆಳೆಯಲು ಈಗಾಗಲೇ ಕಾಲ್ನಡಿಗೆ ಜಾಥಾ, ಮತದಾನ ಕಡಿಮೆಯಾದ ಪಟ್ಟಣದ ಪ್ರದೇಶಗಳಲ್ಲಿ ಮನೆ ಮನೆ ಭೇಟಿ, ಬೈಕ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಡಂಬಳದ ಎರಡು ಮತಗಟ್ಟೆಗಳಲ್ಲಿ ಚಿತ್ರಕಲೆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಮುಂಡರಗಿ ತಾ.ಪಂ ಇಓ ವಿಶ್ವನಾಥ ಹೊಸಮನಿ ವಿವರಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!