ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಶ್ರೀ ಅಂಬಾಭವಾನಿ ದೇವಸ್ಥಾನ ಪಂಚ ಕಮೀಟಿ ಗದಗ, ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಶ್ರೀ ತುಳಜಾಭವಾನಿ ದೇವಸ್ಥಾನ ಪಂಚ ಕಮೀಟಿ ಗದಗ, ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ, ಗದಗ-ಭದ್ರಾಪೂರ, ಶ್ರೀ ಜಗದ್ಗುರು 1008 ಶ್ರೀ ವಿಠ್ಠಲಾರೂಢಸ್ವಾಮಿ ಗುರುನಿರಂಜನ, ಸ್ವಾಮಿ ಸಂಸ್ಥಾನಮಠ ಪಂಚ ಕಮಿಟಿ ಗದಗ ಇವುಗಳ ವಿಶೇಷ ಮಹಾಸಭೆ ಇತ್ತೀಚೆಗೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಫಕೀರಸಾ ಬಾಬಾಸಾ ಭಾಂಡಗೆ ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷರಾದ ರಾಜು ಬದಿ, ಗೌ.ಕಾರ್ಯದರ್ಶಿ ವಿನೋದ್ ಶಿದ್ಲಿಂಗ್, ಸಹ ಕಾರ್ಯದರ್ಶಿ ರವಿ ಶಿದ್ಲಿಂಗ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಮಾಜದ ಸದಸ್ಯರು ಭಾಗವಹಿಸಿದ್ದರು.



