ವಿಜಯಸಾಕ್ಷಿ ಸುದ್ದಿ, ಗದಗ: ಜಮ್ಮು-ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 30 ಜನರ ಕಗ್ಗೊಲೆ ಮಾಡಿದ ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ಭಾರತೀಯ ಸೇನೆ ಯುದ್ಧ ಸಾರಿದ್ದು, ಈ ಯುದ್ಧದಲ್ಲಿ ಭಾರತೀಯ ಸೇನೆ ಜಯಶಾಲಿಯಾಗಲೆಂದು ಪ್ರಾರ್ಥಿಸಿ ಗುರುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಡಾ. ಪಂಡಿತ ಪುಟ್ಟರಾಜ ಕವಿಗಳ ಆಶ್ರಮದಲ್ಲಿ ಸರಾಫ ಅಸೋಸಿಯೇಶನ್ ವತಿಯಿಂದ ವಿಶೇಷ ಪೂಜೆ ಜರುಗಿತು.
ಈ ಕಾರ್ಯಕ್ರಮದಲ್ಲಿ ಸರಾಫ ಅಸೋಸಿಯೇಶನ್ ಅಧ್ಯಕ್ಷ ಸಿದ್ದಲಿಂಗೇಶ ದೇವೆಂದ್ರಪ್ಪ ಮೂರಶಿಳ್ಳಿನ, ಉಪಾಧ್ಯಕ್ಷ ನಾಗರಾಜ ಆರ್.ಮೇರವಾಡೆ, ಕಿರಣ ಭಾಂಡಗೆ, ಶ್ರೀನಿವಾಸ ಭಾಂಡಗೆ, ಸಿದ್ಧಾರ್ಥ ಸಿದ್ಲಿಂಗ್, ಖಜಾಂಚಿ ಮೋಹನ ಪವಾರ, ಕಾರ್ಯದರ್ಶಿ ಸಂಜಯ ರಾಯ್ಕರ, ಉಪಾಧ್ಯಕ್ಷರಾದ ಪರಶುರಾಮ ಖಟವಟೆ, ಶ್ರೀನಿವಾಸ ಬದಿ, ಪ್ರಮೋದ ಶಿದ್ಲಿಂಗ, ಸೋಹಣ ಕಾಟಿಗರ, ವಿನಾಯಕ ಮೇರೆವಾಡೆ, ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ, ಬ್ಯಾಂಕ್ ಅಧಿಕಾರಿ ಶರಣಪ್ಪ ಗುರಮಣ್ಣವರ, ಶರಣ ಬಸವೇಶ್ವರ ಬ್ಯಾಂಕ್ ಅಧ್ಯಕ್ಷರು ಪಾಲ್ಗೊಂಡಿದ್ದರು.