ಯೋಧರ ಯಶಸ್ಸಿಗಾಗಿ ವಿಶೇಷ ಪೂಜೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲದ ವತಿಯಿಂದ ಪಾಕಿಸ್ತಾನದ ಉಗ್ರರನ್ನು ಸದೆಬಡಿಯಲು ಸನ್ನದ್ಧರಾಗಿರುವ, ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಯೋಧರಿಗೆ ಜಯ ಸಿಗಲಿ, ಭಾರತಮಾತೆ ವೀರಯೋಧರ ರಕ್ಷಣೆ ಮಾಡಲಿ ಹಾಗೂ ಉಗ್ರವಾದ ಸರ್ವನಾಶವಾಗಲಿ ಎಂದು ಪ್ರಾರ್ಥಿಸಿ ಗದಗ ಗ್ರಾಮೀಣ ಭಾಗದ ಸೊರಟೂರ ಗ್ರಾಮದ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಪೆಹಲ್ಗಾಮ್ ಘಟನೆಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ವಿರುದ್ಧ ಯಶಸ್ವಿಯಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿರುವದು ಶ್ಲಾಘನೀಯ. ಭಾರತದ ಮಹಿಳೆಯರ ನೋವಿನ ಪ್ರತೀಕಾರಕ್ಕಾಗಿ ಶತ್ರುಗಳನ್ನು ನಾಶಪಡಿಸಲು ನಮ್ಮ ದೇಶದ ನೆಚ್ಚಿನ ಸೈನಿಕರಿಗೆ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀ ಕಾಲಭೈರವ ಅನುಗ್ರಹಿಸಲಿ ಎಂದರು.

ಬಿಜೆಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸ್ಲಾಪೂರ ಮಾತನಾಡಿ, ಅಮಾಯಕರ ಹತ್ಯೆ ಮಾಡಲು ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಸೂಚನೆಯಂತೆ ನಮ್ಮ ಸೈನಿಕರು ಉಗ್ರರ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಉಗ್ರರನ್ನು ಬಲಿಪಡೆದಿದ್ದು ಸ್ವಾಗತಾರ್ಹ ಎಂದರು.

ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ಭಯೋತ್ಪಾದಕರ ವಿರುದ್ಧ ಭಾರತವು ಗೆಲ್ಲಬೇಕು ಎನ್ನುವದು ಪ್ರತೀ ಭಾರತೀಯನ ಆಸೆಯಾಗಿದೆ. ಭಾರತದ ಸೈನಿಕರು ಈ ಯುದ್ಧದಲ್ಲಿ ವಿಜಯಶೀಲರಾಗುತ್ತಾರೆಂದು ವಿಶ್ವಾಸದಿಂದ ನುಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮಣ್ಣ ಕಮ್ಮಾರ, ಸುರೇಶ ಮರಳಪ್ಪನವರ, ಕೆ.ಪಿ. ಕೋಟಿಗೌಡ್ರ, ವಾಯ್.ಪಿ. ಅಡ್ನೂರ, ಬಾಬು ಸುಂಕದ, ಅರವಿಂದ ಅಣ್ಣಿಗೇರಿ, ಅವರವಿಂದಗೌಡ ಪಾಟೀಲ, ಶಿವಪ್ಪ ಅಗಡಿ, ಮಾಂತೇಶ ಘೊಡ್ಕೆ, ಯಲ್ಲಪ್ಪ ಕನ್ನೂರ, ಮೈಲಾರಪ್ಪ ಕಪ್ಪಣ್ಣವರ, ಶರಣಪ್ಪ ಬಂಕಾಪೂರ, ಸಂತೋಷ ಗುಡಿ, ಲಕ್ಷ್ಮಣ ರಣತೂರ, ಅರ್ಚಕರಾದ ಯಲ್ಲಪ್ಪ ಹೂಗಾರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here