ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಶ್ರೀ ಸುಕ್ಷೇತ್ರ ಬೆಳಧಡಿ ಬ್ರಾಹ್ಮಾನಂದಪುರದ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ಟ್ರಸ್ಟ್ ಕಮಿಟಿ ಹಾಗು ಶ್ರೀ ಸೇವಾಲಾಲ ಯುವಕ ಸಂಘ ಬೆಳಧಡಿ ತಾಂಡಾ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಶರಣಬಸವೇಶ್ವರ ಶರಣರಿಗೆ ರುದ್ರಾಭಿಷೇಕ, ಮಯೂರ ಪೂಜೆ ನೆರವೇರಿಸಲಾಯಿತು.
ವೇದಮೂರ್ತಿ ಜಗದೇವಯ್ಯ ನರೆಗಲಮಠ ಮಾತನಾಡಿ, ಹಿಂದೂ ಸಂಸ್ಕೃತಿಯಲ್ಲಿ ಪ್ರಮುಖವಾಗಿ ಗೌರವಿಸಲ್ಪಡುವ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು. ದೇವಾಲಯದ ಕಲೆ, ಪುರಾಣ, ಕಾವ್ಯ, ವಿದ್ಯೆ, ಜಾನಪದ ಸಂಗೀತ ಸೇರಿದಂತೆ ಬಹುತೇಕ ಸಾಂಪ್ರದಾಯಿಕ ಪದ್ಧತಿಗಳಲ್ಲಿ ನವಿಲಿನ ಪಾತ್ರವಿದೆ. ಮಯೂರ ಈ ದೇವಸ್ಥಾನಕ್ಕೆ ಆಗಮಿಸಿ ಶರಣರ ಮೂರ್ತಿಯ ಮೇಲೆ ಕುಳಿತು ನೃತ್ಯ ಮಾಡಿದ್ದು ದೈವಿಕತೆಯ ವಿಶೇಷತೆಯನ್ನೂ ತೋರುವಂತಿದೆ ಎಂದರು.
ಲೋಕಪ್ಪ ಕಾರಭಾರಿ ಹಾಗೂ ಸಂಗಡಿಗರು ಭಜನೆಯೊಂದಿಗೆ ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕರಾದ ದೇವಾನದ ಮಾಳಗಿಮನಿಯವರ ಸಾರಥ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಾಂಡಾದ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಚಂದು ನಾಯಕ, ಮಲ್ಲೇಶ ಕಾರಭಾರಿ, ಪಾಂಡಪ್ಪ ಪೂಜಾರ, ಕುಬೇರಪ್ಪ ಪವಾರ, ತಿಪ್ಪಣ್ಣ ಬೇವಿನಕಟ್ಟಿ, ಉಮೇಶ ಡೋಣಿ, ನಾರಾಯಣ ಪೂಜಾರ, ರಾಮಚಂದ್ರ ತುಳಸಿಮನಿ, ಶಿವಪ್ಪ ನಾಯಕ, ಪಾಂಡು ಚವ್ಹಾಣ, ಹೇಮಂತ ಬೇವಿನಕಟ್ಟಿ, ಗೋವಿಂದ ಡೋಣಿ, ಮೇಘರಾಜ ತುಳಸಿಮನಿ, ನಾರಾಯಣ ಪವಾರ, ಭೀಮಪ್ಪ ನಾಯಕ, ಈಶ್ವರ ಹೊಸಮನಿ, ಶಂಕರ ನಾಯಕ, ವೆಂಕಟೇಶ ಹಾದಿಮನಿ, ರವಿರಾಜ್ ಪವಾರ, ತಾವರೆಪ್ಪ ಚವಾಣ, ಹುಸೇನ್ ತಂಬೂರಿ, ಉಮೇಶ ಮಾಳಗಿಮನಿ, ಅನಿಲ ಮಾಳಗಿಮನಿ, ಲಕ್ಷಣ ಚವ್ಹಾಣ ಮುಂತಾದವರಿದ್ದರು.



