ವಿರಾಟ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಫಾಫ್ ಡುಪ್ಲೆಸಿಸ್!

0
Spread the love

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅವರು ಟೀಮ್ ಇಂಡಿಯಾ ಆಟಗಾರ ಕಿಂಗ್ ಕೊಹ್ಲಿಯ ವಿಶೇಷ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಫಾಫ್ ಡುಪ್ಲೆಸಿಸ್ ಇತ್ತೀಚೆಗಷ್ಟೇ ಟಿ20 ಕ್ರಿಕೆಟ್​ನಲ್ಲಿ 11 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಇದೀಗ ವಿರಾಟ್ ಕೊಹ್ಲಿಯನ್ನು ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.

ಸನ್​ರೈಸರ್ಸ್ ಈಸ್ಟರ್ನ್ ಕೇಪ್​ ವಿರುದ್ಧದ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದರೊಂದಿಗೆ ಫಾಫ್ ಟಿ20 ಕ್ರಿಕೆಟ್​ನಲ್ಲಿ 400 ಮ್ಯಾಚ್​ಗಳನ್ನಾಡಿದ ಸಾಧಕರ ಪಟ್ಟಿಗೆ ಸೇರ್ಪಡೆಯಾದರು.

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 399 ಪಂದ್ಯಗಳನ್ನಾಡಿದ್ದರೆ, ಫಾಫ್ ಡುಪ್ಲೆಸಿಸ್ ಇದೀಗ 400 ಪಂದ್ಯಗಳ ಗುರಿ ಮುಟ್ಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಫಾಫ್​ಗೂ ಮುನ್ನ ಡೇವಿಡ್ ಮಿಲ್ಲರ್ (516) ಹಾಗೂ ಇಮ್ರಾನ್ ತಾಹಿರ್ (426) ಮಾತ್ರ ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಫಾಫ್ ಡುಪ್ಲೆಸಿಸ್ ಎಂಟ್ರಿ ಕೊಟ್ಟಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ 400 ಪಂದ್ಯಗಳನ್ನಾಡಿದ ವಿಶ್ವದ 22ನೇ ಆಟಗಾರನೆಂಬ ಕೀರ್ತಿಗೂ ಫಾಫ್ ಡುಪ್ಲೆಸಿಸ್ ಪಾತ್ರರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here