ಕೊಹ್ಲಿಗೆ ವಿಶೇಷ ಗೌರವ: ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೆಡ್ ಜೆರ್ಸಿ ಬದಲು ವೈಟ್ ಜೆರ್ಸಿ ಅಬ್ಬರ!

0
Spread the love

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ.

Advertisement

ವೈಟ್ ಜೆರ್ಸಿ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿಗೆ  ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್ ಶನಿವಾರ ನಡೆಯುವ ಮ್ಯಾಚ್‌ಗೆ ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ.

ಇಂಡಿಯಾ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಿಂಗ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್‌ನ ವಿದಾಯದ ಸುದ್ದಿ ಕೋಟ್ಯಾಂತರ ಅಭಿಮಾನಿಗಳಿಗೆ ಬರಸಿಡಿಲು ಬಂದಂತೆ ಎರಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಕ್ರಿಕೆಟ್ ಆಡುವಷ್ಟು ಸಾಮರ್ಥ್ಯವಿದ್ದರೂ ವಿರಾಟ್ ದೃಢ ನಿರ್ಧಾರ ಮಾಡಿ ನಿವೃತ್ತಿ ಘೋಷಿಸಿದ್ದಾರೆ. 124 ಟೆಸ್ಟ್ ಮ್ಯಾಚ್‌ಗಳಲ್ಲಿ 9,230 ರನ್ ಹೊಡೆದಿದ್ದ ಕೊಹ್ಲಿಗೆ 770 ರನ್ ಗಳಿಸಿದರೆ 10000 ರನ್‌ಗಳ ಸರದಾರನಾಗುತ್ತಿದ್ದರು. ಆದರೆ ದಾಖಲೆಗೆ ತಲೆಕೆಡಿಸಕೊಳ್ಳದ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಬಿಸಿಸಿಐ ಆದರೂ ಒಂದು ಟೆಸ್ಟ್ ಮ್ಯಾಚ್ ಆಡುವಂತೆ ವಿನಂತಿ ಮಾಡಿ, ವಿದಾಯದ ಬೀಳ್ಕೊಡುಗೆ ಮಾಡಬಹುದಿತ್ತು ಅದನ್ನೂ ಮಾಡಲಿಲ್ಲ. ಇದೀಗ ಅಭಿಮಾನಿಗಳು, ಬಿಸಿಸಿಐ ಬೀಳ್ಕೊಡುಗೆ ಕೊಡಲಿಲ್ಲ ಅಂದರೆ ಏನಂತೆ ನಾವು ಕೊಡ್ತೀವಿ ಅಂತಾ ಸಜ್ಜಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here