ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಪಂ. ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಎ.ಪಿ.ಎಂ.ಸಿ ಯಾರ್ಡ್, ಗದಗ ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಗುರುವಾರದ ಎರಡನೇ ದಿನದ ಗಣೇಶನ ಪೂಜಾ ಕಾರ್ಯಕ್ರಮವನ್ನು ದಲಾಲ ವರ್ತಕರ ಸಂಘದ ವತಿಯಿಂದ ನವಧಾನ್ಯಗಳನ್ನು ಗಣೇಶನ ಮುಂದೆ ಇಟ್ಟು, ರೈತರ ಬೆಳೆಗಳು ರೋಗಮುಕ್ತವಾಗಿ, ಹುಲುಸಾಗಿ ಬೆಳೆದು, ರೈತರ ವಿಘ್ನಗಳು ದೂರವಾಗಲಿ ಎಂದು ವಿಘ್ನವಿನಾಯಕನಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ದಲಾಲ ವರ್ತಕರ ಸಂಘದ ಅಧ್ಯಕ್ಷ ಮುರಘರಾಜೇಂದ್ರ ಬಡ್ನಿ, ಗದಿಗೆಪ್ಪ ದಿಂಡೂರ, ಮೌಲಾಸಾಬ ಮೌಲಾಲಿ, ಕೆ. ಎನ್. ಪಾಟೀಲ, ಹುಚ್ಚಪ್ಪ ಶಾಪೂರ, ಗಜಾನನೋತ್ಸವ ಟ್ರಸ್ಟ್ ಸಮಿತಿಯ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ವಾರಕರ, ಕಾರ್ಯದರ್ಶಿ ರಾಜು ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮಣಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನಿತೀಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ದುಂಡಪ್ಪನವರ, ವಿನಯ ಕಾಡಪ್ಪನವರ, ಬಸವರಾಜ ಕಾಡಪ್ಪನವರ, ಪ್ರವೀಣ, ವಿನೀತ ಕವಲೂರ, ಶರತ್ ಅಗಡಿ, ಸಾಗರ ವಜ್ರೇಶ್ವರಿ, ಅಜಿತ ಪುಣೇಕರ್, ಬಸವರಾಜ ಬಾವಿಕಟ್ಟಿ ಮುಂತಾದವರು ಹಾಜರಿದ್ದರು.