ನ.16ರಂದು ಶಿಗ್ಲಿಯಲ್ಲಿ ನುಡಿನಮನ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ 1992-93ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡಿದ ಸ್ನೇಹಕುಂಜ ಗೆಳೆಯರ ಬಳಗದ ವತಿಯಿಂದ ನ.16ರಂದು ಈಚೆಗೆ ನಿಧನರಾದ ಶಾಲೆಯ ನಿವೃತ್ತ ಶಿಕ್ಷಕ ವಿ.ಬಿ. ಸಾಲಿ ಹಾಗೂ ಎಚ್.ಸಿ. ರಟಗೇರಿ ಗುರುಗಳಿಗೆ ನುಡಿನಮನ ಕಾರ್ಯಕ್ರಮ ಗ್ರಾಮದ ಹಳೆಯ ಬಸ್ ನಿಲ್ದಾಣದ ಬಯಲಿನಲ್ಲಿ ಸಂಜೆ 5ಕ್ಕೆ ಜರುಗಲಿದೆ.

Advertisement

ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಬಳಗದ ಅಧ್ಯಕ್ಷ ಪ್ರಕಾಶ ಬೆಟಗೇರಿ ಹಾಗೂ ಹಿರಿಯ ಸದಸ್ಯ ರಾಜು ಮುಳಗುಂದಮಠ, ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಹಿಸಿಕೊಳ್ಳುವರು. ನಾಡೋಜ ಡಾ. ಮನು ಬಳಿಗಾರ, ಜಾನಪದ ಸಾಹಿತಿ ಡಾ. ಶಂಭು ಬಳಿಗಾರ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ, ವಕೀಲ ಎಸ್.ಪಿ. ಬಳಿಗಾರ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ, ಎಸ್.ಕೆ. ಮಾದನಳ್ಳಿ, ಶಿವಾನಂದ ರಟಗೇರಿ, ದೇವರಾಜ ಸಾಲಿ ಆಗಮಿಸುವರು. ಕಾರಣ ಬಳಗದ ಎಲ್ಲ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಜುನಾಥ ನಾವಿ, ವೀರೇಶ ನೂಲ್ವಿ, ಪ್ರಕಾಶ ಹಡಪದ, ಮಹಾಂತೇಶ ಸುಣಗಾರ, ಪ್ರಕಾಶ ಹಡಪದ, ಬಸವರಾಜ ನೂಲ್ವಿ, ಉಮೇಶ ಪೂಜಾರ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here