ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯಿಂದ ಬರುವ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಬಿಜೆಪಿ ಮುಖಂಡ ಆನಂದಗೌಡ ಎಚ್.ಪಾಟೀಲ್ ಹೇಳಿದರು.
ಡಂಬಳ ಗ್ರಾಮದ ಎಪಿಎಮ್ಸಿ ಆವರಣದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ 286ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳಿ ಮತ್ತು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಕ್ತ ಹಾರ್ಡ್ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದ ಮುಖಂಡ ಹೇಮಗೀರಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಯುವಕರು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರಬೇಕಾದರೆ ಕ್ರೀಡೆಗೆ ಆದ್ಯತೆ ನೀಡಿ. ಕ್ರಿಕೆಟ್ ದೇಶದ ಮತ್ತು ವಿಶ್ವದ ಪ್ರಸಿದ್ಧ ಆಟವಾಗಿದೆ. ಗ್ರಾಮೀಣ ಹಳೆ ಕ್ರೀಡಾಪಟುಗಳು ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪ್ರಾವೀಣ್ಯತೆ ಹೊಂದಿದವರಿಗೆ ಪ್ರೋತ್ಸಾಹ ನೀಡಿದರೆ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.
ಡಂಬಳ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ನಮ್ಮ ಸ್ಥಳೀಯ ಆಟಗಳಿಗೆ ಆದ್ಯತೆ ನೀಡಬೇಕು. ಮೊಬೈಲ್ನಿಂದಾಗಿ ದೈಹಿಕ ಆರೋಗ್ಯ ಹಾಳಾಗುತ್ತಿದೆ. ಇದರಿಂದ ಹೊರಬರಬೇಕು ಎಂದು ಹೇಳಿದರು.
ಗೋಣಿಬಸಪ್ಪ ಕೊರ್ಲಹಳ್ಳಿ, ಡಿಎಸ್ಎಸ್ ಸಂಚಾಲಕ ಸೋಮಣ್ಣ ಹೈತಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಡಿಎಸ್ಎಸ್ ಸಂಚಾಲಕ ದುರಗಪ್ಪ ಹರಿಜನ, ಮಲ್ಲಪ್ಪ ಮಠದ, ಕುಬೇರಪ್ಪ ಕೆ.ಬಂಡಿ, ಮಹೇಶ ಗುಡ್ಡದ, ಬಂದುಸಾಬ ಜಲಾಲನವರ, ಕೆ.ಎನ್. ದೊಡ್ಡಮನಿ, ಪ್ರಕಾಶ ಕೋತಂಬ್ರಿ, ನಿಂಗಪ್ಪ ಮಾದರ, ದುರಗಪ್ಪ ಮಾದರ, ಹಾಲಪ್ಪ ತಾಮ್ರಗುಂಡಿ, ಮರಿಯಪ್ಪ ಸಿದ್ದಣ್ಣವರ, ಯಮನೂರ ದೊಡ್ಡಮನಿ, ದೇವಪ್ಪ ತಳಗೇರಿ, ಮುತ್ತಪ್ಪ ತಳಗೇರಿ, ದೇವಪ್ಪ ತಳಗೇರಿ, ಮುತ್ತಪ್ಪ ದೊಡ್ಡಮನಿ, ವೆಂಕಪ್ಪ ತಳಗೇರಿ, ದುರಗಪ್ಪ ಹರಿಜನ ಪಾಲ್ಗೊಂಡಿದ್ದರು. ಲಕ್ಷ್ಮಣ ದೊಡ್ಡಮನಿ ನಿರೂಪಿಸಿ ವಂದಿಸಿದರು.



