ವಿಜಯಸಾಕ್ಷಿ ಸುದ್ದಿ, ನರೇಗಲ್ : ಕ್ರೀಡೆಯಿಂದ ಮನುಷ್ಯನ ದೇಹ ಸದೃಢಗೊಂಡು ವಿದ್ಯೆ ಕಲಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ಶಾಲೆಯಲ್ಲಿ ಕ್ರೀಡೆಯು ಅವಶ್ಯಕವಾಗಿದೆ’ ಎಂದು ಅಬ್ಬಿಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಆರ್. ಮೂಲಿಮನಿ ಹೇಳಿದರು.
ಅವರು ಸಮೀಪದ ಕುರುಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ 2024-25ನೇ ಸಾಲಿನ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ಶರೀರದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಿಬೂಬಸಾಬ್ ಮುಳಗುಂದ ಕ್ರೀಡಾ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ವೀರಪ್ಪ ರಾಮಣ್ಣವರ, ಪಿಡಿಒ ಶಿಲ್ಪಾ ಕೌವಲೂರ, ಸದಸ್ಯರಾದ ನ್ಯಾಯವಾದಿ ಶೌಕತಅಲಿ ನದಾಫ್, ವಿಜಯಲಕ್ಷ್ಮಿ ವಾಲ್ಮೀಕಿ, ಪವಿತ್ರ ಕುರಿಯವರ, ಮುಖಂಡರಾದ ವೀರಣ್ಣ ಸವಡಿ, ಮಲ್ಲಯ್ಯ ವಸ್ತçದ, ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಮ್ಜಾನಸಾಬ ಚೋಪದಾರ, ಸದಸ್ಯರಾದ ರಮೇಶ್ ಜಾಧವ್, ಕಳಕನಗೌಡ ಅಯ್ಯನಗೌಡ, ಶರಣಪ್ಪ ದೊಡ್ಡಮನಿ, ಗುತ್ತಿಗೆದಾರ ಎಸ್.ಬಿ. ಗವಾರಿ, ಸಿದ್ದು ಹಿರೇಗೌಡ್ರ, ಉರ್ದು ಶಾಲಾ ಮುಖ್ಯ ಶಿಕ್ಷಕ ಎಸ್.ಆರ್. ಅಕ್ಕಿ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ಕುರುಡಗಿ ಯರೆಬೇಲೇರಿ, ನಾಗರಾಳ ಗ್ರಾಮಗಳ ಸರಕಾರಿ ಶಾಲೆಯ 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡು ಆಟಗಳನ್ನು ಪ್ರದರ್ಶಿಸಿದರು. ಮುಖ್ಯ ಶಿಕ್ಷಕಿ ರೇಣುಕಾ ಗಡಗಿ ಸ್ವಾಗತಿಸಿದರು. ಶಿಕ್ಷಕ ಓ ಪೂರ್ಣಯ್ಯ ನಿರೂಪಿಸಿ ವಂದಿಸಿದರು.