ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿಬೇಕು. ಆಗ ಕ್ರೀಡೆಯ ಮಹತ್ವ ಹೆಚ್ಚುತ್ತದೆ ಎಂದು ಬಿಇಓ ಎಚ್.ಲೇಪಾಕ್ಷಪ್ಪ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿ ಮಗುವಿನ ಪ್ರತಿಭೆಗೆ ಅನುಸಾರ ಅವನಿಷ್ಟದ ಆಟವನ್ನು ಆಡಲು ಸಹಕರಿಸಬೇಕು. ಆಗ ಉನ್ನತ ಕ್ರೀಡಾಪಟುವಾಗಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಕ್ರೀಡೆಗೆ ವಿಶೇಷ ಮಹತ್ವ ದೊರೆಯುತ್ತಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಟಿಪಿಇಓ ಕೆ.ಷಣ್ಮುಖಪ್ಪ ಮಾತನಾಡಿ, ಆಟಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಗುವಿನ ಆರೋಗ್ಯದ ಜೊತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿ, ಮಾನಸಿಕ ಸಮತೋಲನ ಕಂಡುಕೊಳ್ಳಬಹುದಾಗಿದೆ. ಕ್ರೀಡೆಯಲ್ಲಿ ಎಲ್ಲಾ ಕೀಳರಿಮೆಯ ಭಾವನೆಯನ್ನು ಬಿಟ್ಟು ಸಹೋದರತ್ವ ಭಾವನೆಯಿಂದ ಆಟವಾಡಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಹೊನ್ನತ್ತೆಪ್ಪ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಕೆ. ನಾಗರಾಜ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ ರೆಡ್ಡಿ, ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಯಪ್ರಕಾಶ್, ಗ್ರೇಡ್ 2 ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಯಣ್ಣ ಪೂಜಾರ, ಜಿಲ್ಲಾ ಗೌರವಾಧ್ಯಕ್ಷ ಎಸ್.ಆರ್. ನಾರೇರ್, ಮಂಜ್ಯಾನಾಯ್ಕ, ಲಕ್ಯಾ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಂದೋಳ್ ಸಿದ್ದೇಶ್, ಕಾರ್ಯದರ್ಶಿ ರಾಜಕುಮಾರ್, ಎಸ್.ರಾಮಪ್ಪ, ರಾಂಮಚಂದ್ರಪ್ಪ, ದಂಡೆಪ್ಪ, ದಾದಾಪೀರ್, ಲಕ್ಮೀದೇವಿ, ನಂದಿನಿ ಒಡೆಯರ್, ನಾಗರತ್ನಮ್ಮ, ಎಂ. ರಮೇಶ್ ಮುಂತಾದವರಿದ್ದರು.