ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ಪೌರಕಾರ್ಮಿಕರಿಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ರಮೇಶ ಪೊತದಾರ್, ನಗರಸಭೆ ಪರಿಸರ ಅಭಿಯಂತರ ಆನಂದ ಬದಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಎಂ.ಎಂ ಮಕಾನದಾರ, ಪೌರಕಾರ್ಮಿಕರ ಹಿರಿಯರಾದ ವಿರುಪಾಕ್ಷಪ್ಪ ಬಿ.ರಾಮಗಿರಿ, ಹೈಸ್ಕೂಲಿನ ಪ್ರಿನ್ಸಿಪಾಲ್, ದೈಹಿಕ ಶಿಕ್ಷಕರು, ಶಿಕ್ಷಕರು ಹಾಗೂ ಪೌರ ಕಾರ್ಮಿಕರ ನೌಕರರ ಜಿಲ್ಲಾಧ್ಯಕ್ಷ ಹೇಮೇಶ್ ಯಟ್ಟಿ, ಗೌರವ ಅಧ್ಯಕ್ಷ ನಾಗರಾಜ್ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ ಪçಜಾರ್, ಶಾಖಾ ಸಂಘದ ಅಧ್ಯಕ್ಷ ಚಂದ್ರು ಹಾದಿಮನಿ, ಸಣ್ಣಪ್ಪ ಬೋಳಮ್ಮನವರ್, ಪಂಚಾಕ್ಷರಿ ದೊಡ್ಡಮನಿ, ವಾಸು ಹಾದಿಮನಿ, ಮೃತ್ಯುಂಜಯ ದೊಡಮನಿ, ಹನುಮಂತ ದೊಡ್ಡಮನಿ, ಮುತ್ತು ಚಲವಾದಿ, ಪರಶುರಾಮ್ ಪçಜಾರ್, ಅರ್ಜುನ್ ದೊಡ್ಡಮನಿ, ವಿಶ್ವನಾಥ ದೊಡ್ಡಮನಿ ಮತ್ತು ಪೌರಕಾರ್ಮಿಕರ ಉಪಸ್ಥಿತಿಯಲ್ಲಿ ವಿವಿಧ ಆಟಗಳನ್ನು ಆಡಲಾಯಿತು.
100 ಮೀಟರ್ ಓಟ, ಚಕ್ರ ಎಸೆತ, ಗುಂಡು ಎಸೆತ, ಕಬ್ಬಡಿ, ಲಿಂಬು ಸ್ಪೂನ್, ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟಗಳನ್ನು ಆಡಿ ಎಲ್ಲಾ ಕಾರ್ಮಿಕರು ಖುಷಿಯಿಂದ ಸಂಭ್ರಮಿಸಿದರು.