ಗದಗ: ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದ ಶ್ರೀ ಹಾಲಶಿವಯೋಗೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ನಾಗರತ್ನ ಚಿಗರಿ ಮತ್ತು ಆಫ್ರಿನ್ ಹಳ್ಳಿಗುಡಿ ರೋಪ್ ಸ್ಕಿಪ್ಪಿಂಗ್ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರಿಗೆ ಹಾಗೂ ತರಬೇತಿ ನೀಡಿದ ದೈಹಿಕ ಉಪನ್ಯಾಸಕ ಕಿರಣಕುಮಾರ ಎಸ್. ಮುಂಡರಗಿಗೆ ತ್ರಿವಿಧ ದಾಸೋಹಿ ಹಾಲೇಶ್ವರ ಶ್ರೀಗಳು, ಪ್ರಾಚಾರ್ಯ ಎಸ್.ವಿ. ಬಿಳಗಿ, ಉಪನ್ಯಾಸಕರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.
Trending Now



