ವಿಜಯಸಾಕ್ಷಿ ಸುದ್ದಿ, ಮುಳಗುಂದ: ಭದ್ರ ಭವಿಷ್ಯ ನಿರ್ಮಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ದೈಹಿಕ ಶಿಕ್ಷಕ ಎಸ್.ಆರ್. ಹಿರೇಗೌಡ್ರ ಹೇಳಿದರು.
Advertisement
ಅವರು ಗದಗ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಜರುಗಿದ ಪ.ಪೂ ವಿಭಾಗದ ಕ್ರೀಡಾ ಕೂಟದಲ್ಲಿ ಬಹುಮಾನ ಗಳಿಸಿದ ಎಸ್‌ಜೆಜೆಎಂ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜೊತೆಯಲ್ಲಿ ಭದ್ರ ಭವಿಷ್ಯ ನಿರ್ಮಾಣಕ್ಕೂ ಸಹಕಾರಿಯಾಗುವುದು ಎಂದರು.
100 ಮೀ, 200 ಮೀ, 800 ಮೀ ಅಡತಡೆ ಓಟದಲ್ಲಿ ಚೈತ್ರಾ ಗೌರಿಮನಿ ಪ್ರಥಮ ಸ್ಥಾನ, 400 ಮೀ ಓಟದಲ್ಲಿ ತಯ್ಯಾಬಾಬಿ ಮಂಟೂರ ಮುಲ್ಲಾ ಪ್ರಥಮ, 3 ಕಿ.ಮೀ ನಡಿಗೆಯಲ್ಲಿ ಕೀರ್ತಿ ಕಾಳೆ ಪ್ರಥಮ, 400 ಮೀ ರೀಲೇನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಎ.ಎಂ. ಅಂಗಡಿ ಹೇಳಿದರು.


