ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸೊತ್ತಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿನ ಸಾಮರ್ಥ್ಯಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಸಮೀಪದ ಹೊಸಳ್ಳಿ ಜಗದ್ಗುರು ಬೂದೀಶ್ವರ ವಿದ್ಯಾಪೀಠದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗದಗ ತಾಲೂಕು ಮಟ್ಟದ `ಬಿ’ ವಲಯದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತೇವೆ. ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಗುರುತಿಸಿಕೊಂಡು ಸಾಧಿಸುವತ್ತ ಸತತ ಪ್ರಯತ್ನ ಮಾಡಿದರೆ ಸಾಧನೆ ಸಾಧ್ಯವಾಗುತ್ತದೆ. ಕ್ರೀಡೆಗಳು ಮಕ್ಕಳ ವ್ಯಕ್ತಿತ್ವ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದರು.
ಪ.ಪೂ ಕಾಲೇಜು ಉಪನಿರ್ದೇಶಕ ಬಂಡು ಮಸನಾಯಕ, ಅಪ್ಪಣ್ಣಾ ಇನಾಮತಿ, ಸಿ.ಬಿ. ಕರಕಟ್ಟಿ, ಶಿವಾನಂದ ದೂಳಪ್ಪನವರ, ಶಿವಕುಮಾರ ಶೇಟ್ಟರ, ಬಸವರಾಜ ಗುಜಮಾಗಡಿ, ಮಂಜುನಾಥ ಅಂಗಡಿ, ಪ್ರಭು ಅಂಗಡಿ, ಅನುರಾಧಾ ರಕ್ಕಸಗಿ, ಟಿ.ವಿ. ರೋಣದ, ಎ.ಎಂ. ಅಂಗಡಿ ಇದ್ದರು.