ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಸದೃಢತೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕ್ರೀಡಾ ಸಾಧನೆಗೆ ಸತತ ಪ್ರಯತ್ನ ಹಾಗೂ ಗುರಿ ಅವಶ್ಯಕ ಎಂದು ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ)ಯ ದೈಹಿಕ ಶಿಕ್ಷಕ ವಿ.ಟಿ. ಅಂಗಡಿ ಹೇಳಿದರು.

Advertisement

ಅವರು ಪಟ್ಟಣದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡಾಕೂಟ ಸಹಕಾರಿಯಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಮಕ್ಕಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿದಲ್ಲಿ ದೇಶದ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಗಣೇಶ ಲಮಾಣಿ, ಅಂಜುಮಾ ಸಂದಿಗವಾಡ, ತನು ಹಿರೇಮಠ, ಪ್ರದೀಪ ಗೌಡನಾಯ್ಕರ, ರೋಹೀತ ಪೂಜಾರ, ಯಶವಂತ ಲಮಾಣಿ ವಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ, ಬಾಲಕರ ಕಬಡ್ಡಿ ಪ್ರಥಮ, ಬಾಲಕಿಯರ ಕಬಡ್ಡಿ ದ್ವಿತೀಯ ಸ್ಥಾನವನ್ನು ಗಳಿಸಿದೆ.

ಕಾರ್ಯಕ್ರಮದಲ್ಲಿ ಶಾಲಾ ಪ್ರಧಾನ ಗುರು ಎಸ್.ಎಚ್. ಪೂಜಾರ, ಎಲ್.ಡಿ. ರಾಠೋಡ, ನೂರಹಮದ ನದಾಫ್, ಎಸ್.ವಿ. ತಿಮ್ಮಾಪೂರ, ಜಿ.ಆರ್. ಕುಂದರಗಿ, ಗೀತಾ ಪಾಟೀಲ, ಬಸವರಾಜ ಗೌರಿಮನಿ, ಮಾಹಾಂತೇಶ ಕೆಂಚನಾಯ್ಕರ ಇದ್ದರು.


Spread the love

LEAVE A REPLY

Please enter your comment!
Please enter your name here