ಶ್ರೀಮಠದ ಬೆಳವಣಿಗೆಯನ್ನು ಸಹಿಸದೇ ಅಪಪ್ರಚಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಭಾವೈಕ್ಯತೆಯ ಕೇಂದ್ರವಾದ ಶ್ರೀ ಜಗದ್ಗುರು ತೋಂಟದಾರ್ಯ ಮಠದ, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹಾಗೂ ಇಂದಿನ ಪೀಠಾಧಿಪತಿಗಳಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ವಿರುದ್ಧ ಅಪಮಾನಕರ ಹೇಳಿಕೆಗಳನ್ನು ನೀಡುತ್ತಾ ಅಪಪ್ರಚಾರ ಮಾಡಿ ಅವರ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿರುವ ಗದುಗಿನ ರಾಜು ಖಾನಪ್ಪನವರ ಹಾಗೂ ಸಹಚರರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತೋಂಟದಾರ್ಯ ಮಠದ ಸದ್ಭಕ್ತರು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರಿಗೆ ಮನವಿ ಸಲ್ಲಿಸಿದರು.

Advertisement

ಭಕ್ತರ ಪರವಾಗಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮನವಿ ಸಲ್ಲಿಸಿ ಮಾತನಾಡಿ, ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರ, ಭಾವೈಕ್ಯತೆಯ ಕ್ಷೇತ್ರವಾಗಿದೆ. ನಮ್ಮ ಶ್ರೀಮಠ ಪ್ರತಿನಿತ್ಯ ಸಹಸ್ರಾರು ಭಕ್ತರಿಗೆ ಗದಗ-ಡಂಬಳ, ಎಡೆಯೂರು ಹಾವೇರಿ, ಕಗ್ಗೆರೆ ಮುಂತಾದ ಕಡೆ ಯಾವುದೇ ಪಂಕ್ತಿಭೇದವಿಲ್ಲದೆ ಉಚಿತ ಅನ್ನದಾಸೋಹವನ್ನು ನಡೆಸುತ್ತಿದೆ. ಹಿಂದುಳಿದ ಹಾಗೂ ಬಡ ಮಕ್ಕಳಿಗಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸಾವಿರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡದ ಮಠ ಎನಿಸಿದೆ.

ಮಠದ ಈ ಎಲ್ಲ ಬೆಳವಣಿಗೆಯನ್ನು ಸಹಿಸದ, ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಬೇಕೆಂಬ ಹಾಗೂ ಈ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಮತ್ತು ಹಿಂದಿನ ಹಾಗೂ ಇಂದಿನ ಶ್ರೀಗಳ ವ್ಯಕ್ತಿತ್ವಕ್ಕೆ ಚ್ಯುತಿ ತರಬೇಕೆಂಬ ಉದ್ದೇಶದಿಂದ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಬೇಕೆಂಬ ಉದ್ದೇಶದಿಂದ ಭಾರತೀಯ ನ್ಯಾಯಶಾಸ್ತçದ ನಿಯಮಗಳನ್ನು ಉಲ್ಲಂಘಿಸಿ ರಾಜು ಖಾನಪ್ಪನವರ ಹಾಗೂ ಇವನ ಸಹಚರರು ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಜಾತ್ರೆಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಹಾಗೂ ಶ್ರೀಗಳನ್ನು ವಿರೋಧಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಸಾಕಷ್ಟು ಅವಮಾನ ಮಾಡಿದ್ದಾರೆ. ಈ ವ್ಯಕ್ತಿ ನೀಡಿದ ಎಲ್ಲ ಹೇಳಿಕೆಗಳು ಸಂಪೂರ್ಣ ಸುಳ್ಳಿನಿಂದ ಕೂಡಿವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೃಷ್ಣಾ ಪರಾಪೂರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಉಪಾಧ್ಯಕ್ಷ ಡಿ.ಜಿ. ಜೋಗಣ್ಣವರ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಎಸ್. ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸದಸ್ಯ ವಿನಾಯಕ ಮಾನ್ವಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ.ಆರ್. ಗೋವಿಂದಗೌಡ್ರ, ಕೆ.ಎಚ್. ಬೇಲೂರ, ಎಸ್.ಎನ್. ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ಮಾರ್ತಾಂಡಪ್ಪ ಹಾದಿಮನಿ, ಗಂಗಾಧರ ಹಿರೇಮಠ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್. ಅಂಗಡಿ, ಗುರುಬಸವ ತಡಸದ, ಮಲ್ಲಿಕಾರ್ಜುನ ಐಲಿ ಇಂಜಿನಿಯರ್, ದಾನಯ್ಯ ಗಣಾಚಾರಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಗದಗ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಬಲರಾಮ ಬಸವಾ, ಜಯಕರ್ನಾಟಕ ಸಂಘಟನೆ ಮುಖ್ಯಸ್ಥ ಚಂದ್ರಕಾಂತ ಚವ್ಹಾಣ, ರಾಮು ಬಳ್ಳಾರಿ, ಮುರುಘೇಶ ಬಡ್ನಿ, ವೀರಣ್ಣ ಜ್ಯೋತಿ, ಪ್ರಕಾಶ ಕೆರೂರ, ಎಂ.ಎಸ್. ಪಾಟೀಲ, ಜೆ.ಟಿ ವಿದ್ಯಾಪೀಠದ ಕಾರ್ಯದರ್ಶಿ ಪಟ್ಟಣಶೆಟ್ಟರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ಸಿದ್ಧಣ್ಣ ಬಂಗಾರಶೆಟ್ಟರ, ಅಮರೇಶ ಅಂಗಡಿ, ಅಶೋಕ ಕುಡತಿನಿ, ಕೆ.ಎಸ್. ಪಲ್ಲೇದ, ರಾಚಪ್ಪ ಮಿಣಜಗಿ, ಶೇಖಣ್ಣ ಕಳಸಾಪೂರ, ಎಸ್.ಎಸ್. ಭಜಂತ್ರಿ, ಮಾರುತಿ ಬುರಡಿ, ಪ್ರಕಾಶ ಉಗಲಾಟದ, ವೀರಣ್ಣ ಗೊಟಡಕಿ, ಸಿದ್ಧರಾಮಪ್ಪ ಗೊಜನೂರ, ಜಯಣ್ಣ ಶೆಟ್ಟರ, ವೈಜನಾಥ ಕೌತಾಳ, ಕುಮಾರ ಮಾದರ, ಅಲ್ತಾಫ್ ಖಾನಾಪೂರ, ಪರಶುರಾಮ ಸಮಗಾರ, ಶಿವಯೋಗಿ ತಡಸದ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

200 ವರ್ಷಗಳಿಗಿಂತ ಅಧಿಕ ಕಾಲ ಗದಗ ಮಠದ ಸುತ್ತಲೂ ಇರುವ ಅಂದಾಜು 80 ಎಕರೆ ಮೂಲತಃ ಮಠದ ಮಾಲೀಕತ್ವದ ಪೈಕಿ ಜಾಗೆಯಲ್ಲಿ ಜಾತ್ರೆ ನಡೆಯುತ್ತ ಬಂದಿದೆ. ಈ ಜಾಗೆಯಲ್ಲಿರುವ ಯಾವುದೇ ರಸ್ತೆಯನ್ನು ನಾವು ನಗರಸಭೆಯ ಸ್ವಾಧೀನಕ್ಕೆ ಕೊಟ್ಟಿಲ್ಲ. ನಗರಸಭೆ ಸ್ಥಾಪನೆಯ ಪೂರ್ವದಿಂದಲೂ ಶ್ರೀಮಠದ ಜಾತ್ರೆ ನಡೆಯುತ್ತ ಬಂದಿದೆ. ಈ ಜಾಗೆ ಮಠದ ಮಾಲಿಕತ್ವದ ಜಾಗೆ ಎಂಬುದಕ್ಕೆ ಸಾಕಷ್ಟು ದಾಖಲೆಗಳು ಮತ್ತು ನಗರಸಭೆಯ ಆದೇಶಗಳೂ ಇವೆ ಎಂದು ಡಾ. ಧನೇಶ ದೇಸಾಯಿ ವಿವರಿಸಿದರು.


Spread the love

LEAVE A REPLY

Please enter your comment!
Please enter your name here