ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಶ್ರೀ ಅನ್ನದಾನೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನ 2023-24ರ ದ್ವಿತೀಯ ಪಿಯುಸಿ ಫಲಿತಾಂಶವು ಶೇ. 99 ಆಗಿದೆ ಎಂದು ಪ್ರಾಚಾರ್ಯ ವೈ.ಸಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಾ ವಿಭಾಗದಲ್ಲಿ ಶೇ. 98.84, ವಾಣಿಜ್ಯ ವಿಭಾಗದಲ್ಲಿ ಶೇ. 98.88, ವಿಜ್ಞಾನ ವಿಭಾಗದಲ್ಲಿ 98.49 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 751 ವಿದ್ಯಾರ್ಥಿಗಳಲ್ಲಿ 741 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 293 ಡಿಸ್ಟಿಂಕ್ಷನ್ ಆಗಿದ್ದು, 407 ಪ್ರಥಮ ಶ್ರೇಣಿ, 39 ದ್ವಿತೀಯ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪದವಿಪೂರ್ವ ಮಹಾವಿದ್ಯಾಲಯದ ಫಲಿತಾಂಶವು ಕಳೆದ 12 ವರ್ಷಗಳಿಂದ ಏರಿಕೆಯಾಗುತ್ತಲಿದೆ. ಇದಕ್ಕೆಲ್ಲ ನಮ್ಮ ಸಿಬ್ಬಂದಿಯವರ ನಿರಂತರ ಪರಿಶ್ರಮ ಮತ್ತು ನಮ್ಮ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಆಡಳಿತ ಮಂಡಳಿ ಹಾಗೂ ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳ ಹಾಗೂ ಈಗಿನ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಆಶೀರ್ವಾದ ಮತ್ತ ಶ್ರದ್ಧೆಯಿಂದ ಓದಿದ ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ ಎಂದು ತಿಳಿಸಿದ್ದಾರೆ.
ವಿಭಾಗವಾರು ಫಲಿತಾಂಶ ಹೀಗಿದೆ. ಕಲಾ ವಿಭಾಗ- ಬಸಮ್ಮ ಜಗ್ಗಲ (585) ಪ್ರಥಮ, ರಶ್ಮೀ ಮಮಟಗೇರಿ (577) ದ್ವಿತೀಯ, ನಾಗರಾಜ (567) ತೃತಿಯ. ವಾಣಿಜ್ಯ ವಿಭಾಗ- ಆನಂದ ಗಡಗಿ (577) ಪ್ರಥಮ, ಲಕ್ಷ್ಮಿ ಕೋಡಿಕೊಪ್ಪಮಠ (577) ಪ್ರಥಮ, ಮಧು ಕುಂಬಾರ (574) ದ್ವಿತೀಯ, ನಿಖಿಲ್‌ಕುಮಾರ ಕಮ್ಮಾರ (574) ದ್ವಿತೀಯ, ಬಂಗಾರಪ್ಪ ಗಡೇದ (570) ತೃತೀಯ. ವಿಜ್ಞಾನ ವಿಭಾಗ- ಪುಷ್ಪಾ ಅಂಗಡಿ (585) ಪ್ರಥಮ, ಅನ್ನಪೂರ್ಣ ಮುಗಳಿ (581) ದ್ವಿತೀಯ, ಶರಣಗೌಡ ಪೊಲೀಸ್‌ಪಾಟೀಲ (579) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.