ಶ್ರೀ ಅನ್ನದಾನೇಶ್ವರ ಪ್ರೌಢಶಾಲೆ ವೀರಾಗ್ರಣಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಅಬ್ಬಿಗೆರೆ ಶ್ರೀ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ನರೇಗಲ್ಲ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಜರುಗಿತು. ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತು.

Advertisement

ಬಾಲಕರ ವಿಭಾಗದಲ್ಲಿ ಪುಟ್ಟರಾಜ ತಳವಾರ 200 ಮೀ ಮತ್ತು 400 ಮೀ. ಓಟದಲ್ಲಿ ಪ್ರಥಮ, ನಾಗರಾಜ ಕಮ್ಮಾರ 200 ಮೀ ಓಟದಲ್ಲಿ ದ್ವಿತೀಯ, ಪ್ರತಾಪ ಬಂಡಿಹಾಳ 800 ಮೀ ಓಟದಲ್ಲಿ ಬಹುಮಾನ ಪಡೆದರೆ, ಪೃಥ್ವಿಕುಮಾರ ಚವಡಿ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದ 1500 ಮೀ ಮತ್ತು 3000 ಮೀ ಓಟದಲ್ಲಿ ಲಕ್ಷ್ಮೀ ತಳವಗೇರಿ ಪ್ರಥಮ, 800 ಮೀ ಓಟದಲ್ಲಿ ರೇಣುಕಾ ಕಂಠೆಣ್ಣವರ ಪ್ರಥಮ, 200 ಮೀ ಓಟದಲ್ಲಿ ಐಶ್ವರ್ಯ ದುತ್ತಾರಿ ದ್ವಿತೀಯ, 1500 ಮೀ ಓಟದಲ್ಲಿ ತ್ರಿವೇಣಿ ತಲ್ಲೂರ ದ್ವಿತೀಯ, ಸಂಗೀತಾ ಮೂಲಿಮನಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ ತಿಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಪುಟ್ಟರಾಜ ತಳವಾರ ವೈಯಕ್ತಿಕ ವೀರಾಗ್ರಣಿ ಮತ್ತು ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ ತಳವಗೇರಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here