ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಲ್ಲಿನ ಎಸ್.ಎ. ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇ. 92.79ರಷ್ಟಾಗಿದೆ ಎಂದು ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲಾ ವಿಭಾಗದ ಫಲಿತಾಂಶ ಶೇ.91.2, ವಾಣಿಜ್ಯ ವಿಭಾಗದ ಫಲಿತಾಂಶ ಶೇ.95.24 ಮತ್ತು ವಿಜ್ಞಾನ ವಿಭಾಗದ ಫಲಿತಾಂಶ ಶೇ. 92.53ರಷ್ಟಾಗಿದೆ.
ಕಲಾ ವಿಭಾಗದಲ್ಲಿ 250 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 228 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 210 ವಿದ್ಯಾರ್ಥಿಗಳಲ್ಲಿ 200 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 442 ವಿದ್ಯಾರ್ಥಿಗಳಲ್ಲಿ 409 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಅರ್ಚನಾ ಕುದರಿ ಶೇ. 95.33 ಪ್ರಥಮ, ಮಲ್ಲನಗೌಡ ಮುದಿಗೌಡರ ಶೇ. 94.83 ದ್ವಿತೀಯ, ಶರಣಮ್ಮ ಪಂಗಿಯವರ ಶೇ. 94.67 ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸೌಭಾಗ್ಯ ಅಂಗಡಿ ಶೇ. 97 ಪ್ರಥಮ, ದರ್ಶನ ದೇಶನೂರ ಶೇ. 96.17 ದ್ವಿತೀಯ ಮತ್ತು ಸುಕನ್ಯಾ ಬಿಲ್ಲಿಕೇರಿ ಶೇ 95.67 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಸುಮಾ ಪಟ್ಟಣಶೆಟ್ಟಿ ಶೇ. 97 ಪ್ರಥಮ, ಭೂಮಿಕಾ ಪೂಜಾರ ಶೇ. 96.17 ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಶೇ. 95.83 ಅಂಕಗಳೊಂದಿಗೆ ಕೀರ್ತಿ ತಳವಾರ, ಮಂಜುಳಾ ಗೊಲ್ಲರ, ಆಕಾಶ ಅಂಗಡಿ ಹಂಚಿಕೊಂಡಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ.
ಕಾಲೇಜಿನ ಕುಸುಮಾ ಪಟ್ಟಣಶೆಟ್ಟಿ ಶೇ. 97 ಅಂಕಗಳೊAದಿಗೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಈ ಸಾರೆ ನಮ್ಮ ಕಾಲೇಜಿನ ಒಟ್ಟು 17 ವಿದ್ಯಾರ್ಥಿಗಳು ಶೇ. 90 ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿ ಪಾಸಾಗಿರುವುದು ನಮ್ಮ ಬೋಧಕ ಸಿಬ್ಬಂದಿಯವರ ಶ್ರಮಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ಅವರನ್ನು ಮತ್ತು ನಮಗೆ ಬೆನ್ನೆಲುಬಾಗಿ ನಿಂತ ನಮ್ಮ ಎಸ್ಎವಿವಿಪಿ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು ಮತ್ತು ಸರ್ವ ಸದಸ್ಯರನ್ನು, ಸಾಧನೆಗೈದ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುವುದಾಗಿ ಪಾಟೀಲ ತಿಳಿಸಿದ್ದಾರೆ.