HomeGadag Newsಡಿ. 18ರಿಂದ 24ರವರೆಗೆ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ

ಡಿ. 18ರಿಂದ 24ರವರೆಗೆ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ 175ನೇ ಜಾತ್ರಾ ಮಹೋತ್ಸವವು ಡಿ. 18ರಿಂದ ಡಿ. 24ರವರೆಗೆ ಜರುಗಲಿದೆ. ಡಿ. 18ರ ಬೆಳಿಗ್ಗೆ 9 ಗಂಟೆಗೆ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸ ಸ್ವಾಮೀಜಿಗಳಿಂದ ಷಟಸ್ಥಲ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರಕಲಿದೆ. ಡಿ. 19ರಿಂದ ಡಿ. 22ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಲಘು ರಥೋತ್ಸವ ಜರುಗಲಿದೆ.

ಡಿ. 21 ಮತ್ತು 22ರಂದು ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ಭಜನಾ ಸ್ಪರ್ಧೆ ಮತ್ತು ಪಗಡೆ ಆಟದ ಸ್ಪರ್ಧೆಗಳು ಜರುಗಲಿವೆ. ಡಿ. 23ರಂದು ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, 12.30ಕ್ಕೆ ನರೇಗಲ್ಲನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ವಿದ್ಯಾರ್ಥಿಗಳು ಪಾದಯಾತ್ರೆಯ ಮೂಲಕ ಹಾಲಕೆರೆಯ ಶ್ರೀಮಠಕ್ಕೆ ಆಗಮಿಸುವರು. ಹಿರಿಯ ಶಿಕ್ಷಕ ಎಂ.ಎ. ಹಿರೇವಡೆಯರವರ ಅಭಿನಂದನಾ ಗ್ರಂಥ `ಒಲವಿನ ಒಡೆಯ’ ಬಿಡುಗಡೆ ಸಮಾರಂಭ ಜರುಗಲಿದ್ದು, ಶಿರಹಟ್ಟಿ, ಬಾಲೇಹೊಸೂರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗ್ರಂಥ ಪರಿಚಯವನ್ನು ಶಿವಾನಂದಯ್ಯ ಚರಂತಿಮಠ, ಪ್ರಧಾನ ಸಂಪಾದಕ ಸಿ.ಆರ್. ಯರವಿನತೇಲಿಮಠ ಸೇರಿದಂತೆ ಇತರರು ಆಗಮಿಸಲಿದ್ದಾರೆ.

ಡಿ. 23ರ ಸಂಜೆ 6.30ಕ್ಕೆ ಲಿಂ. ಹಿರಿಯ ಅನ್ನದಾನ ಮಹಾಶಿವಯೋಗಿಗಳವರ 113ನೇ ಹಾಗೂ ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳ ಚತುರ್ಥ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯವನ್ನು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದು, ನಂದವಾಡಗಿ ಮಹಾಂತೇಶ್ವರಮಠ ಮಹಾಂತಲಿAಗ ಶಿವಾಚಾರ್ಯರು, ದರೂರು ಸಂಗನಬಸವೇಶ್ವರಮಠದ ಕೊಟ್ಟೂರು ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗರಗನಾಗಲಾಪೂರದ ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನ ಪ್ರಭು ಸ್ವಾಮೀಜಿ, ಮರಿಕೊಟ್ಟೂರು ದೇಶಿಕರು ಸಮ್ಮುಖ ವಹಿಸುವರು. ಆರ್.ಬಿ. ಪಾಟೀಲ, ಹಾಲಕೆರೆ ಗ್ರಾ.ಪಂ ಅಧ್ಯಕ್ಷ ಗಿರಿಯಪ್ಪಗೌಡ ಮುಲ್ಕಿಪಾಟೀಲ, ಉಪಾಧ್ಯಕ್ಷ ಬಾಳಪ್ಪ ತಲೇಖಾನ, ಸುಭಾಸ ಛಾಯಗೋಳ ಇತರರು ಆಗಮಿಸಲಿದ್ದಾರೆ. ದ್ಯಾಮಣ್ಣ ಮಾಸ್ತರ ಬಡಿಗೇರ, ಕಳಕಮಲ್ಲಯ್ಯ ಅಣ್ಣಿಗೇರಿಮಠ, ಮುತ್ತಣ್ಣ ಬಡಿಗೇರ, ಶೇಖಪ್ಪ ಕೋಗಿಲೆ ಸಂಗೀತ ಸೇವೆ ನೀಡಲಿದ್ದಾರೆ.

ಸಂಜೆ 6.30ಕ್ಕೆ ಕೃಷಿ ವಿಚಾರ ಗೋಷ್ಠಿ ಜರುಗಲಿದ್ದು, ಖೇಳಗಿ ಶಿವಲಿಂಗೇಶ್ವರ ಸಂಸ್ಥಾನಮಠದ ಶಿವಲಿಂಗ ಸ್ವಾಮೀಜಿ, ಗುರುಸಿದ್ದ ಶಿವಾಚಾರ್ಯರು, ಅಭಿನವ ಪಂಚಾಕ್ಷರ ಶಿವಾಚಾರ್ಯರು, ಕಾಡಸಿದ್ದೇಶ್ವರ ಶಿವಾಚಾರ್ಯರು, ಶಿವಲಿಂಗದೇಶಿಕರು, ಶರಣಬಸ ದೇವರು, ಶಿಶರಣಬಸವ ಶರಣರು ಸಮ್ಮುಖ ವಹಿಸುವರು. ಶಾಸಕ ಜಿ.ಎಸ್. ಪಾಟೀಲ, ಸಂಸದ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ. ಹಿರಿಯ ಬೇಸಾಯ ವಿಜ್ಞಾನಿ ಬಸವರಾಜ ಏಣಗಿ ಇವರಿಂದ ಉಪನ್ಯಾಸ ಜರುಗಲಿದೆ. ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಸಿದ್ದಣ್ಣ ಬಂಡಿ ಆಗಮಿಸಲಿದ್ದಾರೆ. ನಿವೃತ್ತ ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಡಾ. ಜಿ.ಕೆ. ಕಾಳೆ, ಎ.ಸಿ. ಪಾಟೀಲ, ಜಿಲ್ಲಾ ಕಾನಿಪ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ, ಜಿಲ್ಲಾ ಕಾನಿಪ ಸದಸ್ಯ ನಿಂಗರಾಜ ಬೇವಿನಕಟ್ಟಿ, ಆದರ್ಶ ಕುಲಕರ್ಣಿ ಅವರಿಗೆ ಸನ್ಮಾನ ಜರುಗಲಿದೆ.

ಗಂಗಾವತಿ ಬಿ. ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ತಂಡದ ಇಂದ ಹಾಸ್ಯ ಸಂಜೆ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿ.24ರ ಬೆಳಿಗ್ಗೆ 5-7ರವರೆಗೆ ಶ್ರೀ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರುತಿ ಜರುಗಲಿವೆ. ಬೆಳಿಗ್ಗೆ 10 ಗಂಟೆಗೆ ಸೋಮಸಮುದ್ರದ ಸಿದ್ದಲಿಂಗ ಸ್ವಾಮೀಜಿಯವರಿಂದ ಜಂಗಮೋತ್ಸವ ಜರುಗಲಿದೆ. 10.30ಕ್ಕೆ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಜರುಗಲಿದೆ. 12.20ಕ್ಕೆ ಅಕ್ಷರಯೋಗಿ, ಕಾಯಕಯೋಗಿ ಲಿಂ. ಗುರು ಅನ್ನದಾನ ಮಹಾಶಿವಯೋಗಿಗಳ ಜೀವನಾಧಾರಿತ `ಬೆತ್ತದ ಅಜ್ಜ’ ಚಲನಚಿತ್ರದ ಮುಹೂರ್ತ ಜರುಗಲಿದೆ. ಸಂಜೆ 5ಕ್ಕೆ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವ ಜರುಗಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!