ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬೆಳಧಡಿ ಗ್ರಾಮದ ಸ್ವಯಂ ಉದ್ಭವ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ನೂತನ ತೇರು ಹಾಗ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 20ರ ಬೆಳಿಗ್ಗೆ 6 ಗಂಟೆಗೆ ನೂತನ ರಥದ ಆಗಮನದ ಪೂಜೆ, ಕುಂಭ ಮೇಳ ಸಕಲ ವಾದ್ಯದೊಂದಿಗೆ ಜರುಗಿತು. ಉದ್ಭವ ಶ್ರೀ ಬಯಲು ಬಸವೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ನೂತನ ರಥ ಗ್ರಾಮ ಪ್ರವೇಶ ಮಣಕವಾಡದ ಮ.ನಿ.ಪ್ರ. ಮೃತ್ಯುಂಜಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು.

Advertisement

ಫೆ.20ರಿಂದ 27ರವರೆಗೆ ಸಾಯಂಕಾಲ 7ರಿಂದ 8 ಗಂಟೆವರೆಗೆ ಪರಮಪೂಜ್ಯ ಶ್ರೀ ಬಸವ ಸಮರ್ಥ ಜ್ಞಾನ ಯೋಗಾಶ್ರಮ ಶಿರುಂಜ ಇವರಿಂದ ಆಧ್ಯಾತ್ಮಿಕ ಪ್ರವಚನ ಜರುಗುತ್ತಿದೆ. ಫೆ. 26ರ ಬೆಳಿಗ್ಗೆ 6ರಿಂದ ಫೆ.27ರ ಬೆಳಿಗ್ಗೆ 6 ಗಂಟೆಯವರೆಗೆ ಜಾಗರಣೆ ಜರುಗುವುದು. ಫೆ.27ರಂದು ಬೆಳಿಗ್ಗೆ 6 ಗಂಟೆಗೆ ಪರಮಪೂಜ್ಯ ಕಲ್ಲಯ್ಯಜ್ಜನವರಿಂದ ತೇರಿಗೆ ಮಂಗಳ ದ್ರವ್ಯಗಳ ಅರ್ಪಣೆ, ಬೆಳಿಗ್ಗೆ 9 ಗಂಟೆಗೆ ಶ್ರೀಗಳಿಂದ ಆಶೀರ್ವಚನ ಹಾಗೂ ಸದ್ಭಕ್ತರಿಂದ ಮಹಾಪ್ರಸಾದ ಜರುಗುವುದು. ಸಾಯಂಕಲ 6 ಗಂಟೆಗೆ ಆಶೀರ್ವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೇಶ್ವರ ಮಹಾಶಿವಯೋಗಿಳವರು ವಹಿಸುವರು.

ಫೆ. 28ರ ಮುಂಜಾನೆ 6 ಗಂಟೆಗೆ ಶ್ರೀ ಬಯಲು ಆಂಜನೇಯ ಬಸವೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ಹೋಮ, ಹವನ, ಕಳಸಾರೋಹಣ ಜರುಗುವುದು. ಸಾಯಂಕಾಲ 5-58ರ ಅಮೃತ ಘಳಿಗೆಯಲ್ಲಿ ಮಹಾರಥೋತ್ಸವ ಜರುಗುವುದು. ಫೆ.28ರ ಬೆಳಿಗ್ಗೆ 10 ಗಂಟೆಗೆ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು 13ನೇ ಪಟ್ಟಾಧ್ಯಕ್ಷರಾದ ಸರ್ವಧರ್ಮ ಸಮನ್ವಯದ ಭಾವೈಕ್ಯತಾ ಪೀಠಾಧ್ಯಕ್ಷರಾದ ಶ್ರೀ ಮನ್ಮಹಾರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠ ಸುಕ್ಷೇತ್ರ ಶಿರಹಟ್ಟಿ, ಸಮ್ಮುಖವನ್ನು ಪರಮಪೂಜ್ಯ ಶ್ರೀ ದತ್ತಾವಧೂತರು ಶ್ರೀ ಚೈತನ್ಯ ಆಶ್ರಮ ಹುಬ್ಬಳ್ಳಿ, ದಿವ್ಯ ಉಪಸ್ಥಿತಿ ಶ್ರೀ ಮ.ನಿ.ಪ್ರ. ಸ್ವ ಚಿದಾನಂದ ಮಹಾಸ್ವಾಮಿಗಳು ಕಪ್ಪತ್ತಮಠ ಹಿರೇಸಿಂದೋಗಿ, ಶ್ರೀ ಮ.ನಿ.ಪ್ರ. ಸ್ವ. ಅಭಿನವ ಬೂದೀಶ್ವರ ಮಹಾಸ್ವಾಮಿಗಳು, ಶ್ರೀ ವೇ.ಮೂ. ಶಂಭುಲಿAಗಯ್ಯ ವೀರಭದ್ರಯ್ಯ ಕಲ್ಮಠ ಗುರುಗಳು ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ ಆಗಮಿಸುವರು. ವೆಂಕಟೇಶ್ವರ ಪ್ರೌಢಶಾಲೆ ಬೆಳಧಡಿ ವಿದ್ಯಾರ್ಥಿಗಳಿಂದ ಫೆ.20ರಿಂದ 27ರವರೆಗೆ ಪ್ರತಿದಿನ ಸಾಯಂಕಲ 6ರಿಂದ 7 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

ಫೆ.28ರ ರಾತ್ರಿ 10-30ಕ್ಕೆ ಸತ್ಯದ ದೀಪ ಹಚ್ಚಿದ ಬಡವ ಅರ್ಥಾತ್ ಧರ್ಮದ ಮನೆಯಲ್ಲೊಂದು ಕರ್ಮದ ಕಾಂಡ ನಾಟಕ ಪ್ರದರ್ಶನ ಜರಗುವುದು.

ಮಾರ್ಚ್ 1ರ ಸಾಯಂಕಾಲ 5 ಗಂಟೆಗೆ ಕಡುಬಿನ ಕಾಳಗ ಜರುಗುವುದು. ಈ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಬೆಳಧಡಿ, ಬ್ರಹ್ಮಾನಂದಪುರ, ಕಬಲಾಯತಕಟ್ಟಿ, ನಭಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು, ಗ್ರಾ.ಪಂ ಸರ್ವ ಸದಸ್ಯರು ಹಾಗೂ ಊರಿನ ಗುರುಹಿರಿಯರು ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಗತ ಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here