ವಿಜಯಸಾಕ್ಷಿ ಸುದ್ದಿ, ಕಡೇನಂದಿಹಳ್ಳಿ: ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳವರ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಪ್ರಯುಕ್ತ ‘ಶ್ರೀ ಗುರು ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ’ ಪ್ರದಾನ ಹಾಗೂ ಗುರು ಪೂರ್ಣಿಮಾ ಧರ್ಮ ಸಮಾರಂಭ ಜುಲೈ 10ರಂದು ಸಂಜೆ 4.30ಕ್ಕೆ ಜರುಗಲಿದೆ.
ಪ್ರಶಸ್ತಿ ಪ್ರದಾನ ಮಾಡಲು ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಹಿರೇಕೆರೂರ ಶಾಸಕರಾದ ಯು.ಬಿ. ಬಣಕಾರ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕಡೇನಂದಿಹಳ್ಳಿ ಶ್ರೀ ಹೋಳಿಹಂಪೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜಪ್ಪ ಚನ್ನಳ್ಳೇರ ಹಾಗೂ ಗ್ರಾ.ಪಂ ಅಧ್ಯಕ್ಷ ಲಿಂಗರಾಜ ಚನ್ನಳ್ಳಿ ಭಾಗವಹಿಸುವರು.
ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕನ್ನೂರು-ಸಿಂಧನೂರು ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು.
ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬಿ.ಹೆಚ್. ಬನ್ನಿಕೋಡ, ಅಂಬಾರಗೊಪ್ಪದ ಮಾಜಿ ಪ್ರಧಾನರಾದ ಎನ್.ಶೇಖರಪ್ಪ, ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಕೊಂಟೋಜಿರಾವ್ ಆರ್.ಬಿಸಲಹಳ್ಳಿ ಜೀವರಾಜ ಛತ್ರದ, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಡಾ. ಈಶ್ವರ್‌ರಾವ್ ಎ., ಕುಡುಪಲಿಯ ರಮ್ಯಾ ವಾಗೀಶ ಹಿರೇಮಠ, ಕ್ರೀಡಾ ಕ್ಷೇತ್ರದ ಬನ್ನಿಹಟ್ಟಿಯ ಮಂಜುಳಾ ಲಮಾಣಿ, ಶಿಕಾರಿಪುರದ ಅಂಕಿತ, ಆರಕ್ಷಕ ಕ್ಷೇತ್ರದ ಹಿರೇಕೆರೂರು ವೃತ್ತ ನಿರೀಕ್ಷಕ ಬಸವರಾಜ ಪಿ.ಎಸ್., ಶಿಕಾರಿಪುರದ ಆರಕ್ಷಕ ಶಂಕರಗೌಡ ಎನ್.ಹೆಚ್ ಹಾಗೂ ಪರಿಸರ ಸಂರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಪರೋಕಾರಂ ಕುಟುಂಬ ಮತ್ತು ಬೆಲವಂತನಕೊಪ್ಪದ ವನ್ಯಜೀವಿ ಸಂರಕ್ಷಕ ಅರುಣ್ ಕುಮಾರ್ ಜಿ.ಎನ್ ಇವರಿಗೆ ಶ್ರೀ ಗುರು ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಹೊಸನಗರದ ಮಂಜುನಾಥ ಭಟ್, ಶಿಕಾರಿಪುರದ ಟಿ.ಎಸ್. ದೇವೇಂದ್ರಪ್ಪ, ಬೆಂಗಳೂರಿನ ಅರುಣಕುಮಾರ್ ಎಂ., ಶಿವಲಿಂಗಯ್ಯ ಅಲ್ಲಯ್ಯನವರಮಠ, ವೀಣಾ ಹಿರೇಮಠ, ಅಂಕಿತ ಮತ್ತು ವೇ. ಗುರುಶಾಂತಯ್ಯ ಕಲ್ಯಾಣಮಠ ಇವರಿಗೆ ಗೌರವ ಗುರುರಕ್ಷೆ ನೀಡಲಾಗುವುದು ಎಂದು ಶ್ರೀ ಗುರು ರೇವಣಸಿದ್ದೇಶ್ವರ ಜನಕಲ್ಯಾಣ ಟ್ರಸ್ಟಿನ ಪ್ರಕಟಣೆ ತಿಳಿಸಿದೆ.