ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರಾಜಸ್ಥಾನದ ಕಲಾಕುಂಜ ಫೌಂಡೇಶನ್ ಬಿವಾಡಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ 8ನೇ ವರ್ಷದ ಇಂಟರ್ನ್ಯಾಷನಲ್ ಚಿಲ್ಡçನ್ ಆರ್ಟ್ ಕಾಂಪಿಟೇಶನ್ ಚಿತ್ರಕಲಾ ಸ್ಪರ್ಧೆಯಲ್ಲಿ ಗದಗ-ಬೆಟಗೇರಿ ನಗರದ ಎಸ್‌ಎಸ್‌ಕೆ ಶ್ರೀ ಜಗದಂಬಾ ಶಿಕ್ಷಣ ಸಮಿತಿಯ ಎಸ್‌ಎಸ್‌ಕೆ ಶ್ರೀ ಜಗದಂಬಾ ಆಂಗ್ಲೋ ಮಾಧ್ಯಮ ಶಾಲೆ ಹಾಗೂ ಶ್ರೀಮತಿ ಎಲ್.ಎನ್. ಬದಿ ಆಂಗ್ಲೋ ಮಾಧ್ಯಮ ಪ್ರೌಢಶಾಲೆಯ 100 ವಿದ್ಯಾರ್ಥಿಗಳು ಭಾಗವಹಿಸಿ ವಿಷಯ ಪೂರಕ ಚಿತ್ರಗಳನ್ನು ರಚಿಸಿ ಬೆಸ್ಟ್ ಪೇಂಟಿಂಗ್‌ಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಾಥಮಿಕ ವಿಭಾಗ ಮಟ್ಟದಲ್ಲಿ 62 ಹಾಗೂ ಪ್ರೌಢ ವಿಭಾಗದಲ್ಲಿ 38 ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಚಿತ್ರಕಲೆ ಮತ್ತು ಕರಕುಶಲ ತರಬೇತಿ ನೀಡಿದ ಕಲಾವಿದ ಡಾ. ಜಾಕೀರಹುಸೇನ ಕೊರ್ಲಹಳ್ಳಿ ಇವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಚೇರಮನ್ ಗೋವಿಂದರಾಜ ವಿ.ಬಸವಾ, ವೈಸ್ ಚೇರಮನ್ ದತ್ತು ಯು.ಪವಾರ, ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ ಬಿ.ಕಬಾಡಿ, ಸದಸ್ಯ ಸತ್ಯನಾರಾಯಣಸಾ ಕಬಾಡಿ, ಪಂಚ ಟ್ರಸ್ಟ್ ಕಮಿಟಿಯ ಎಲ್ಲ ಸದಸ್ಯರು, ಮುಖ್ಯೋಪಾಧ್ಯಾಯರಾದ ಎಸ್.ಡಿ. ಬೆಣಕಲ್ ಹಾಗೂ ಸಿ.ಎಸ್. ಹವಳದ ಮತ್ತು ಎಲ್ಲ ಶಿಕ್ಷಕರು ಅಭಿನಂದಿಸಿದ್ದಾರೆ.
ಶ್ರೀ ಜಗದಂಬಾ ಶಾಲಾ ಮಕ್ಕಳಿಗೆ ಲಲಿತ ಕಲೆಯಲ್ಲಿ ಪ್ರಶಸ್ತಿ
Advertisement