HomeShivamoggaಶ್ರೀ ಜ. ಪಂಚಾಚಾರ್ಯ ಯುಗಮಾನೋತ್ಸವ

ಶ್ರೀ ಜ. ಪಂಚಾಚಾರ್ಯ ಯುಗಮಾನೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಗರದ ಸಹ್ಯಾದ್ರಿ ಕಾಲೇಜ ಹಿಂಭಾಗದಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ 30ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಜೂನ್ 14ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.

ಎಸ್.ಆರ್.ಎನ್. ಫೌಂಡೇಶನ್ ಹಾಗೂ ಮಹಾತ್ಮ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಸ್.ಆರ್. ನವಲಿ ಹಿರೇಮಠ ಸಮಾರಂಭವನ್ನು ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಎಸ್‌ಜೆಪಿ ಐಟಿಐ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ಶಾಸಕ ಚನ್ನಬಸಪ್ಪ ಎಸ್.ಎನ್. ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜದ ಗೌರವಾಧ್ಯಕ್ಷ ಟಿ.ವಿ. ಈಶ್ವರಯ್ಯ, ವೀರಶೈವ ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ, ವೀರಶೈವ ಕಲ್ಯಾಣ ಮಂಟಪದ ಕಾರ್ಯದರ್ಶಿ ಎನ್.ಜೆ. ರಾಜಶೇಖರ, ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕರಿಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ, ಗಾಜನೂರು ಸರ್ಕಾರಿ ಮಹಿಳಾ ಐಟಿಐ ಪ್ರಾಚಾರ್ಯ ಬಿ.ಟಿ. ಶೇಖರಪ್ಪ ಭಾಗವಹಿಸುವರು.

ಜಗದೀಶ್ವರ ಸೋಲಾಪುರಮಠ ಹಾಗೂ ವಿಜಯಕುಮಾರ ಜಿ.ಎಂ. ಇವರಿಗೆ ಗುರುರಕ್ಷೆ ನೀಡಲಾಗುವುದು. ಪಿಯುಸಿ, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ವಧು-ವರರ ಸಮಾವೇಶ: ಅದೇ ದಿವಸ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ನಡೆಯಲಿದ್ದು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥಾಪಕ ವಿಘ್ನೇಶ್ವರಯ್ಯ ನೀ ಸೋಲಾಪುರ ಅಧ್ಯಕ್ಷತೆ ವಹಿಸುವರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಶ್ರೀಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಸ್‌ಜೆಪಿ ಐಟಿಐ ಸಂಸ್ಥಾಪಕ ಅಧ್ಯಕ್ಷ ವಿಘ್ನೇಶ್ವರಯ್ಯ ನೀ ಸೋಲಾಪುರ ತಿಳಿಸಿದ್ದಾರೆ.

ಉಚಿತ ಆರೋಗ್ಯ ತಪಾಸಣೆ: ಅದೇ ದಿನ ಟಿ.ಎಮ್.ಎ.ಇ.ಎಸ್ ಆಯುರ್ವೇದ ಮಹಾವಿದ್ಯಾಲಯ ನಿಧಿಗೆ ಇವರ ಸಹಯೋಗ ಹಾಗೂ ಸಿಬ್ಬಂದಿಯ ಸಹಕಾರದಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.

ವ್ಯಕ್ತಿತ್ವ ವಿಕಸನ ತರಬೇತಿ: ಮಧ್ಯಾಹ್ನ ಐಟಿಐ ಹಿರಿಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ನಡೆಯಲಿದೆ.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!