ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೋಡಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ನಿಂತು ಹೋಗಿರುವ ಜಾತ್ರೆಯನ್ನು 1997ರಲ್ಲಿ ನಗರದ ಹಾಗೂ ಓಣಿಯ ಹಿರಿಯರು ಸೇರಿ ಪುನಃ ಪ್ರಾರಂಭಿಸಿ ಇಲ್ಲಿಯವರೆಗೂ ಪ್ರತಿವರ್ಷ ನಡೆಸಿಕೊಂಡು ಬಂದಿದ್ದು, ಈ ವರ್ಷದ ಶ್ರೀ ಕೋಡಿ ಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ ದವನದ ಹುಣ್ಣಿಮೆಯ ದಿನ ಎಪ್ರಿಲ್ 12ರಂದು ನಡೆಯಲಿದೆ.
Advertisement
ಅಂದು ಬೆಳಿಗ್ಗೆ 8 ಗಂಟೆಗೆ ಕೋಡಿ ಯಲ್ಲಮ್ಮದೇವಿಯ ಭಾವಚಿತ್ರ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನವನ್ನು ತಲುಪುವುದು. ಸಂಜೆ 5ಕ್ಕೆ ರಥೋತ್ಸವ ಜರುಗಲಿದ್ದು, ಏ. 13ರಂದು ಸಂಜೆ 5ಕ್ಕೆ ಕಡುಬಿನ ಕಾಳಗ, ಎ. 14ರಿಂದ 16ರವರೆಗೆ ನಾಡಿನ ಹೆಸರಾಂತ ಕುಸ್ತಿಪಟುಗಳಿಂದ ಜಂಗಿ ಬಯಲು ಕುಸ್ತಿಗಳು ಜರುಗಲಿವೆ ಎಂದು ಭಕ್ತ ಕಮಿಟಿಯ ಪ್ರಕಟಣೆ ತಿಳಿಸಿದೆ.