ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತಾಲೂಕಿನ ಜಂತ್ಲಿ ಶಿರೂರ ಗ್ರಾಮದಲ್ಲಿ ಎಪ್ರಿಲ್ 6ರಂದು ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ನೆರವೇರಲಿದೆ.
ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಮಾರುತಿ ದೇವರಿಗೆ ರುದ್ರಾಭಿಷೇಕ, ಸಾಯಂಕಾಲ 5 ಗಂಟೆಯಿಂದ ಡೊಳ್ಳು, ಕರಡಿ ಮೇಳ, ಭಜನಾ ಮೇಳ, ಸಕಲ ವಾದ್ಯ-ಮೇಳಗಳೊಂದಿಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪಾಲಕಿ ಉತ್ಸವ ನಡೆಯುವುದು. ಚಿಕ್ಕೇನಕೊಪ್ಪದ ಚನ್ನವೀರ ಶರಣರಮಠದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸುವರು. ನಂತರ ಉತ್ಸವಕ್ಕೆ ಬಂದ ಸದ್ಭಕ್ತರಿಗೆ ಮಹಾದಾಸೋಹ ನೆರವೇರುವುದು. ರಾತ್ರಿ ಸಾಮಾಜಿಕ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಎ.7ರಂದು ಸಾಯಂಕಾಲ 7 ಗಂಟೆಗೆ ಶ್ರೀ ಪರಮಪೂಜ್ಯ ಧರ್ಮರಾಜ ಧರ್ಮರಮಠ ಸಾ. ಕಣಗಿನಹಾಳ ಇವರ ಸಾನ್ನಿಧ್ಯದಲ್ಲಿ ಲಘು ರಥೋತ್ಸವ ನಡೆಯುವುದು. ಸರ್ವ ಸದ್ಭಕ್ತರು ಆಗಮಿಸಿ ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಎಂದು ಹನುಮಂತಪ್ಪ ನಾಗಪ್ಪ ಚಿಗರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.