ಹಾವೇರಿ: ದರ್ಗಾ ಮೇಲೆ ಶ್ರೀರಾಮನ ಭಾವಚಿತ್ರ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಯುವಕನೊಬ್ಬನನ್ನು ರಾಣೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ನಯನ ಕಿಟ್ಟದ ಎಂಬಾತ ಇನ್ ಸ್ಟಾಗ್ರಾಮನಲ್ಲಿ ರಾಣೆಬೆನ್ನೂರ ಜಮಾಲಶ್ಯಾವಲಿ ದರ್ಗಾದ ಮೇಲೆ ಶ್ರೀರಾಮ್ ಪೋಟೋ ಇಟ್ಟು ವೈರಲ್ ಮಾಡಿದ್ದನು.
Advertisement
ಈ ಹಿನ್ನೆಲೆ ಕೋಪಗೊಂಡ ಉಭಯ ಕೋಮಿನ ಸಮುದಾಯದ ಮುಖಂಡರ ಮಧ್ಯ ಮಾತಿನ ಚಕಮಕಿ ನಡೆದು ಗಲಾಟೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ರಾಣಿಬೆನ್ನೂರು ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಶೇರ್ ಮಾಡಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಣೆಬೇನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.