ಶ್ರೀ ಶಂಕರರು ಹಿಂದೂ ಧರ್ಮದ ಪುನರುತ್ಥಾರಕರು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾರಕರು. ಹಿಂದೂ ಧರ್ಮ ನಶಿಸಿ ಹೋಗುತ್ತಿದ್ದ ಸಂದರ್ಭದಲ್ಲಿ ಅವತರಿಸಿದ ಅವರು ಹಿಂದೂ ಧರ್ಮದ ಪುನರುತ್ಥಾನಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡರು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

Advertisement

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಚರಿಸಲಾದ ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕೇವಲ 32 ವರ್ಷ ಬದುಕಿದ್ದ ಶಂಕರರು ಅಷ್ಟರಲ್ಲಾಗಲೇ ವೇದಗಳಿಗೆ ಭಾಷ್ಯವನ್ನು ಬರೆದರು. ಅನೇಕ ವಾದಗಳನ್ನು ಗೆದ್ದು ಸರ್ವಜ್ಞ ಪೀಠವನ್ನಲಂಕರಿಸಿದ ಮಹಾತ್ಮರು. ಭರತ ಖಂಡದಾದ್ಯAತ ಧರ್ಮ ಸ್ಥಾಪನೆಗಾಗಿ ನಾಲ್ಕೂ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ನಮ್ಮ ನಾಡಿನ ಶೃಂಗೇರಿಯೂ ಸಹ ಅವುಗಳಲ್ಲಿ ಒಂದಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಶಂಕರಾಚಾರ್ಯರರಿಗೆ ಸುಮಂಗಲೆಯರು ಆರತಿ ಬೆಳಗಿದರು. ಈವೇಳೆ ದೇವಸ್ಥಾನದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ, ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಕಾರ್ಯದರ್ಶಿ ರಘುನಾಥ ಕೊಂಡಿ, ಶ್ರೀಪಾದಭಟ್ಟ ಜೋಷಿ, ಶ್ರೀಪಾದ ಕುಲಕರ್ಣಿ, ಅರುಣ ಕುಲಕರ್ಣಿ(ಕುರಗಡ್ಡಿ), ಆನಂದ ಕುಲಕರ್ಣಿ, ಮುಕುಂದಭಟ್ಟ ಸೂರಭಟ್ಟನವರ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಾಮಕೃಷ್ಣ ಸದರಜೋಷಿ, ಶೋಭಾ ಕುಲಕರ್ಣಿ, ವಿಮಲಾಬಾಯಿ ಗ್ರಾಮಪುರೋಹಿತ, ಶಾರದಾಬಾಯಿ ಗ್ರಾಮಪುರೋಹಿತ, ರಾಜಶ್ರೀ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, ನಿಖಿತಾ ಗ್ರಾಮಪುರೋಹಿತ, ಅರ್ಚನಾ ಕುಲಕರ್ಣಿ, ಅನಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ರೂಪಾ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ ಇನ್ನಿತರರಿದ್ದರು.

ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿದ ಶ್ರೀ ಶಂಕರರು, ಈ ಸಿದ್ಧಾಂತದ ಪ್ರತಿಪಾದನೆಗೆ ಬೇಕಾದ ಎಲ್ಲ ಅಂಶಗಳನ್ನೂ ನೀಡಿದರು. ಅಜ್ಞಾನದ ನಾಶವೇ ಮೋಕ್ಷ. ಸೂಕ್ತ ಸಮಯದಲ್ಲಿ ದಾನ ಮಾಡುವುದೇ ಮೌಲ್ಯಯುತ. ಸತ್ಯವೇ ಅಂತಿಮವಾಗಿ ಜೀವಿಗಳಿಗೆ ಸಹಾಯ ಮಾಡುವ ಮಾರ್ಗ. ಒಬ್ಬರ ಶುದ್ಧ ಮನಸ್ಸನ್ನು ಅತ್ಯಂತ ಶ್ರೇಷ್ಠ ಯಾತ್ರೆ ಎಂದು ಪರಿಗಣಿಸಲಾಗುತ್ತದೆ. ಬ್ರಹ್ಮನೊಂದಿಗೆ ಬಂಧವನ್ನು ಪಡೆಯಲು ಅಂತಿಮವಾಗಿ ಸಹಾಯ ಮಾಡುವುದು ಜ್ಞಾನ ಎಂಬಿತ್ಯಾದಿ ಬೋಧನೆಗಳನ್ನು ಶಂಕರರು ನೀಡಿದರು ಎಂದು ಕುಲಕರ್ಣಿ ಹೇಳಿದರು.


Spread the love

LEAVE A REPLY

Please enter your comment!
Please enter your name here