ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ವಿಶ್ವ ಮಧ್ವಮಹಾಪರಿಷತ್ ಗದಗ ಶಾಖೆ ವತಿಯಿಂದ ಜ. 30ರಿಂದ ಫೆ. 6ರವರೆಗೆ ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀ ಮನ್ಮದ್ವ ನವರಾತ್ರೋತ್ಸವ ಕಾರ್ಯಕ್ರಮ ಜರುಗಲಿದೆ
ಜ. 30ರ ಬೆಳಿಗ್ಗೆ 7 ಗಂಟೆಗೆ ಶ್ರೀ ಮದಾಚಾರ್ಯರ ಭಾವಚಿತ್ರ ಹಾಗೂ ಸರ್ವಮೂಲ ಗ್ರಂಥಗಳ ಸನ್ನಿಧಿಯಲ್ಲಿ ನಂದಾದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಂಜೆ 6-30ಕ್ಕೆ ಜ್ಞಾನಸತ್ರ ಕಾರ್ಯಕ್ರಮ ನಿಮಿತ್ತ ಧಾರವಾಡದ ಪಂ. ಪುಷ್ಕರಾಚಾರ್ಯ ಶಿರಹಟ್ಟಿ ಇವರಿಂದ ವ್ಯಾಸಾವತಾರ ನಿರ್ಣಯ ವಿಷಯ ಕುರಿತು ಉಪನ್ಯಾಸ ಜರುಗುವುದು.
ಜ. 31ರ ಸಂಜೆ 6-30ಕ್ಕೆ ಭಗವದ್ಗೀತಾ ಚತುರ್ಥಾಧ್ಯಾಯ ವಿಷಯ ಕುರಿತು ಬೆಂಗಳೂರಿನ ಪಂ. ಪುರಂದರಾಚಾರ್ಯ ಹಯಗ್ರೀವ್ ಇವರಿಂದ ಉಪನ್ಯಾಸ ಜರುಗುವುದು. ಫೆ. 1ರ ಸಂಜೆ 6-30ಕ್ಕೆ ಕೃಷ್ಣಾಮೃತ ಮಹಾರ್ಣವ ವಿಷಯ ಕುರಿತು ಪಂ. ರಘೋತ್ತಮಾಚಾರ್ಯ ನಿಲೂಗಲ್ಲ ಅವರಿಂದ ಉಪನ್ಯಾಸ, ಫೆ. 2ರ ಸಂಜೆ 6-30ಕ್ಕೆ ಯಮಕಭಾರತ ವಿಷಯ ಕುರಿತು ಬಾಗಲಕೋಟೆಯ ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ಇವರಿಂದ ಉಪನ್ಯಾಸ ಜರುಗುವುದು.
ಫೆ. 5ರ ಬೆಳಿಗ್ಗೆ 6 ಗಂಟೆಗೆ ಶ್ರೀ ಸುಮಧ್ವವಿಜಯ, ಸರ್ವಮೂಲ ಗ್ರಂಥಗಳ ಪಾರಾಯಣ, ವಾಯುಸ್ತುತಿ ಪುನಶ್ಚರಣ ನಂತರ ಸಂಜೆ 6-30ಕ್ಕೆ ಮುಖ್ಯಪ್ರಾಣ ಮಹಿಮಾ ವಿಷಯ ಕುರಿತು ಹುಬ್ಬಳ್ಳಿಯ ಪಂ. ಪಾಂಡುರಂಗಾಚಾರ್ಯ ಹುನಗುಂದ ಇವರಿಂದ ಉಪನ್ಯಾಸ ಜರುಗುವುದು. ಫೆ. 6ರ ಬೆಳಿಗ್ಗೆ 6 ಗಂಟೆಗೆ ಶ್ರೀ ಸುಮಧ್ವವಿಜಯ, ಸರ್ವಮೂಲ ಗ್ರಂಥಗಳ ಪಾರಾಯಣ, ವಾಯುಸ್ತುತಿ ಪುನಶ್ಚರಣ ಸಹಿತಹೋಮ, ನಂತರ 9 ಗಂಟೆಗೆ ಹರೇಶ್ರೀನಿವಾಸ ಭಜನಾ ಮಂಡಳಿ, ರುಕ್ಮಿಣಿ ಭಜನಾ ಮಂಡಳಿ, ಲಕ್ಷ್ಮೀನಾರಾಯಣ ಭಜನಾ ಮಂಡಳಿ, ಹರಿಪ್ರಿಯಾ ಭಜನಾ ಮಂಡಳಿ, ಸಹಕಾರದಲ್ಲಿ ಶ್ರೀಮದಾಚಾರ್ಯರ ಪ್ರತಿಮೆ ಹಾಗೂ ಸರ್ವಮೂಲ ಗ್ರಂಥಗಳ ಭವ್ಯ ಮೆರವಣಿಗೆ ಜರುಗುವುದು. ನಂತರ ಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ ಜರುಗುವವು.
ಸಂಜೆ 6-30ಕ್ಕೆ ಶ್ರೀ ಮದಾಚಾರ್ಯರ ಸಂದೇಶ ವಿಷಯ ಕುರಿತು ಪಂ. ಶ್ರೀ ವರದರಾಜಾಚಾರ್ಯ ಹುನಗುಂದ ಇವರಿಂದ ಉಪನ್ಯಾಸ ಜರುಗಲಿದ್ದು, ಹುಬ್ಬಳ್ಳಿಯ ಪಂ. ಶ್ರೀ ಪಾಂಡುರಂಗಾಚಾರ್ಯ ಹುನಗುಂದ ಇವರು ಅಧ್ಯಕ್ಷತೆ ವಹಿಸುವರು.
8 ದಿನಗಳ ಕಾಲ ನಡೆಯುವ ಕಾರ್ಯಕ್ರಮವು ಶ್ರೀ ವೀರನಾರಾಯಣ, ಶ್ರೀ ತ್ರಿಕೂಟೇಶ್ವರ ವಿಶ್ವಸ್ಥ ಮಂಡಳಿ, ಶ್ರೀ ರಾಘವೇಂದ್ರಸ್ವಾಮಿ ಉತ್ಸವ ಮಂಡಳ, ಶ್ರೀ ವೀರನಾರಾಯಣ ಯುವಕ ಮಂಡಳ, ಶ್ರೀ ಮಹಾಲಕ್ಷ್ಮೀ ಯುವತಿ ಮಂಡಳ, ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಮಂಡಳ ಇವರ ಸಹಕಾರದಲ್ಲಿ ಜರುಗಲಿದೆ ಎಂದು ಶ್ರೀ ವಿಶ್ವಮಧ್ವ ಮಹಾಪರಿಷತ್ ಗದಗ ಶಾಖೆ ಪ್ರಕಟಣೆ ತಿಳಿಸಿದೆ.
ಫೆ. 3ರ ಸಂಜೆ 6-30ಕ್ಕೆ ದ್ರೌಪದಿ ಪಂಚಪತಿತ್ವನಿರ್ಣಯ ವಿಷಯ ಕುರಿತು ಧಾರವಾಡದ ಪಂ. ಕೇಶವಾಚಾರ್ಯ ಕೆರೂರ ಇವರಿಂದ ಉಪನ್ಯಾಸ, ಫೆ. 4ರ ಸಂಜೆ 6-30ಕ್ಕೆ ಏಕಾದಶಸ್ಕಂದ ಭಾಗವತ ತಾತ್ಪರ್ಯ ವಿಷಯ ಕುರಿತು ಬೆಂಗಳೂರಿನ ಪಂ. ವಾಸುದೇವಾಚಾರ್ಯ ಸತ್ತಿಗೇರಿ ಇವರಿಂದ ಉಪನ್ಯಾಸ ಜರುಗುವುದು.