ದಲಿತ ಮಿತ್ರ ಮೇಳ ಅನಿರ್ದಿಷ್ಟಾವಧಿ ಧರಣಿಗೆ ಶ್ರೀರಾಮ ಸೇನಾ ಬೆಂಬಲ

0
Sriram Sena support for the sit-in
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಮಠದ ಜಾತ್ರೆಯ ನಂತರ ರಥಬೀದಿಯಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರ-ವಹಿವಾಟನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ದಲಿತ ಮಿತ್ರ ಮೇಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಶ್ರೀರಾಮ ಸೇನಾ ನಗರ ಘಟಕ ಬೆಂಬಲ ಸೂಚಿಸಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸೇನಾದ ಅಧ್ಯಕ್ಷ ಅಶೋಕ ಭಜಂತ್ರಿ, ಈ ಹಿಂದೆ ತೋಂಟದಾರ್ಯ ಮಠದ ಜಾತ್ರೆ ನಂತರ 5 ದಿನ ವ್ಯಾಪಾರ ನಡೆಯುತ್ತಿತ್ತು. ಕೆಲ ವರ್ಷಗಳಿಂದ 10-15 ದಿನ ನಡೆಯುತ್ತಿತ್ತು. ಆದರೆ ಸದ್ಯ ರಥೋತ್ಸವ ಮುಗಿದು ಸುಮಾರು 60 ದಿನ ಕಳೆದರೂ ಅಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೆರಡು ದಿನಗಳಲ್ಲಿ ಸದರಿ ಅಂಗಡಿಗಳನ್ನು ತೆರವುಗೊಳಿಸದಿದ್ದಲ್ಲಿ ಜಾತ್ರಾ ಮಹೋತ್ಸವದಲ್ಲಿ ಇರುವ ಅಂಗಡಿಗಳಿಗೆ ಶ್ರೀರಾಮ ಸೇನಾ ನಗರದ ಘಟಕದ ವತಿಯಿಂದ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರಾದ ಶಿವಯೋಗಿ ಹಿರೇಮಠ, ಸಂಜು ಶೆಟ್ಟಿ, ಶ್ರೀಧರ್ ಮಾಧುಗುಂಡಿ, ಮಂಜು ಮೇಳ್ಳನ್ನವರ್, ಹರೀಶ್ ಹುಣಸಿಮರದ, ಸಂಜು ಚಟ್ಟಿ ಶ್ರೀಧರ ಮಾಧುಗುಂಡಿ ಮಂಜು ಮೇಳ್ಳನ್ನವರ್ ಹರೀಶ ಹುಣಸಿಮರದ, ಹುಲಗಪ್ಪ ವಾಲ್ಮೀಕಿ ಸುನೀಲ ಮುಳ್ಳಾಳ, ಬಸವರಾಜ ಬನ್ನಿಮರದ, ಪ್ರವೀಣ ಜಲಗಾರ, ಸಾಗರ ಹುಯಿಲಗೋಳ, ಕೃಷ್ಣ ಹುಯಿಲಗೋಳ, ಪುಟ್ಟರಾಜ ಕಳಸಣ್ಣವರ, ವಿನಾಯಕ ಹುಯಿಲಗೋಳ, ಸಂತೋಷ ಕುರಿ, ಮಹೇಶ ಹೊಸೂರ, ಭರತ ಲದ್ದಿ, ಮಂಜುನಾಥ ಬಂಡಿವಡ್ಡರ, ಶಿವು ಲದ್ದಿ, ಬಸು ನವಲಿ, ಕುಮಾರ್ ನಡಗೇರಿ, ವೆಂಕಟೇಶ ದೊಡ್ಡಮನಿ, ಮಾಹಾಂತೇಶ ಪಾಟೀಲ ಮುಂತಾದವರು ಉಪಸ್ಥಿತರಿದರು.


Spread the love

LEAVE A REPLY

Please enter your comment!
Please enter your name here