ವಿಜಯಸಾಕ್ಷಿ ಸುದ್ದಿ, ಧಾರವಾಡ: ಇತ್ತೀಚೆಗೆ ಕಾಶ್ಮೀರದ ಫೆಹಲ್ಗಾಂವ್‌ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯವು ಹಿಂದೂ ಸಮಾಜಕ್ಕೆ ಆಘಾತ ಉಂಟುಮಾಡಿದ್ದು, ಉಗ್ರರ ಹುಟ್ಟಡಗಿಸಲು ಕೇಂದ್ರ ಸರಕಾರ ಅತ್ಯಂತ ಬಿಗಿ ಕ್ರಮಗಳನ್ನು ಕೈಕೊಳ್ಳಬೇಕೆಂದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದ್ದಾರೆ.
ಹಿಂದುಗಳು ಬಹುಸಂಖ್ಯಾತರಾಗಿರುವ ಭಾರತಕ್ಕೆ ಬಂದು ಧರ್ಮಾಧಾರಿತವಾಗಿ ಹತ್ಯೆ ಮಾಡಿರುವುದರ ಹಿಂದೆ ಶತ್ರು ರಾಷ್ಟçಗಳ ಕುಮ್ಮಕ್ಕು ಇದ್ದಂತಿದೆ. ಈ ಸಂದರ್ಭದಲ್ಲಿ ಕೇವಲ ಆಂತರಿಕ ಭದ್ರತೆಯ ಕಡೆ ಗಮನ ಕೊಟ್ಟು ಸುಮ್ಮನಾಗದೆ, ಈ ಹಿಂದೆ ಅಮೆರಿಕಾದ ಪೆಂಟಾಗಾನ್ ಕಟ್ಟಡದ ಮೇಲೆ ದಾಳಿ ನಡೆಸಿದ ಒಸಾಮ ಬಿನ್ ಲಾಡೆನ್‌ನನ್ನು ಆತನು ಅಡಗಿ ಕುಳಿತದ್ದಲ್ಲಿಗೆ ಹೋಗಿ ಅಮೆರಿಕಾ ಸೇನೆ ಹತ್ಯೆ ಮಾಡಿದಂತೆ, ನರೇಂದ್ರ ಮೋದಿಯವರು ಕೃತ್ಯದ ಹೊಣೆ ಹೊತ್ತಿರುವ ಉಗ್ರ ಸಂಘಟನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಆಗ ಮಾತ್ರ ಉಗ್ರವಾದಿಗಳ ಇಂತಹ ಹೇಯ ಕೃತ್ಯಗಳು ಸಂಪೂರ್ಣವಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದ್ದಾರೆ.


