ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಜಗದಂಬಾ ದೇವಿ ದೇವಸ್ಥಾನದಲ್ಲಿ ಎಸ್.ಎಸ್.ಕೆ ಸಮಾಜ ಹಾಗೂ ಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ 15ನೇ ವರ್ಷದ ಬಹುಮಾನ ವಿತರಣಾ ಸಮಾರಂಭ, ಧರ್ಮ ಜಾಗೃತಿ ಸಭೆ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಕಿ ಜಮುನಾಬಾಯಿ ಸುರೇಶ್ ಖೋಡೆ ಮಾತನಾಡಿ, ಮಕ್ಕಳ ಗುರಿ ಮುಟ್ಟಿಸುವಲ್ಲಿ ತಂದೆ-ತಾಯಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿ ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ರಾಜ್ಯದಲ್ಲಿನ ಲವ್ ಜಿಹಾದ್ ಪ್ರಕರಣಗಳ ಜಾಗೃತಿಗಾಗಿ ಸಮಾಜದ ಯುವಕ-ಯುವತಿಯರಿಗೆ ಲವ್ ಜಿಹಾದ್ ವಿರುದ್ಧ ಪಂಚಟ್ರಸ್ಟ್ ಕಮಿಟಿಯ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ್ ಅವರು, ನನ್ನ ಸನಾತನ ಹಿಂದೂ ಧರ್ಮದ ಎಸ್‌ಎಸ್‌ಕೆ ಸಮಾಜದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತೇನೆ ಹಾಗೂ ಅನ್ಯ ಧರ್ಮದ ಯಾವುದೇ ಹಬ್ಬ ಆಚರಣೆಗಳನ್ನು ನಾನು ಆಚರಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನನಗೆ ಜನ್ಮ ನೀಡಿದ ತಂದೆ-ತಾಯಿಯ ಗೌರವಕ್ಕೆ ಧಕ್ಕೆ ಬರದಂತೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.
ಎಸ್‌ಎಸ್‌ಕೆ ಹಿತರಕ್ಷಣಾ ಸಮಾಜದ ಅಧ್ಯಕ್ಷ ಸುಭಾಸ ರಾಯಬಾಗಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಲಕ್ಷö್ಮಣ ರಂಗ್ರೇಜ, ಗಣೇಶ ರಾಯಬಾಗಿ, ನಾಗೇಶ ಶಿಂಗ್ರಿ, ಸರಸ್ವತಿಬಾಯಿ ಶಿಂಗ್ರಿ, ಶಾರದಾಬಾಯಿ ರಾಯಬಾಗಿ, ಸುರೇಶ ರಂಗ್ರೇಜ ಸೇರಿ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ, ಹಿತರಕ್ಷಣಾ ಸಮಿತಿ, ತರುಣ ಸಂಘ ಹಾಗೂ ಗಾಯತ್ರೀದೇವಿ ಮಹಿಳಾ ಮಂಡಳದ ಸದಸ್ಯರು ಇದ್ದರು.