ವಿಜಯಸಾಕ್ಷಿ ಸುದ್ದಿ, ಗದಗ: ಎಸ್‌ಎಸ್‌ಕೆ ಸಮಾಜದ ಒಗ್ಗಟ್ಟು ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಸಂಗಮೇಶ ಕವಳಿಕಾಯಿ ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ್ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2025ರ ಮೊದಲನೆ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್‌ಎಸ್‌ಕೆ ಸಮಾಜಕ್ಕೆ ಲಿಪಿ ಇಲ್ಲದಿದ್ದರೂ ಅವರ ಭಾಷೆ ಗಟ್ಟಿತನದಿಂದ ಕೂಡಿದೆ. ಅವರಲ್ಲಿನ ಒಗ್ಗಟ್ಟು, ಧರ್ಮ ರಕ್ಷಣೆ ಹಾಗೂ ಸಂಸ್ಕಾರ ಎಲ್ಲರಿಗೂ ಮಾದರಿಯಾಗಿದೆ. ಈ ಸಮಾಜಕ್ಕೂ ನಮ್ಮ ಕುಟುಂಬಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧ ಇರುವದರಿಂದ ಮುಂದಿನ ದಿನಗಳಲ್ಲಿ ನಾನು ಈ ಸಮಾಜಕ್ಕೆ ಸಹಾಯ-ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಪಂಚ ಕಮಿಟಿ ಸಹ ಕಾರ್ಯದರ್ಶಿ ರವಿ ಶಿದ್ಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗಣ್ಯ ಉದ್ಯಮಿಗಳಾದ ಸಾಗರ ಪವಾರ, ವಿನಾಯಕ ಹಬೀಬ, ಎಸ್‌ಎಸ್‌ಕೆ ಸಮಾಜದ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ದಸರಾ ಕಮಿಟಿ ಚೇರಮನ್ ಅನಿಲ್ ಖಟವಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚ ಕಮಿಟಿ ಸದಸ್ಯರಾದ ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಶ್ರೀನಿವಾಸ ಬಾಂಡಗೆ, ಪರಶುರಾಮ ಬದಿ, ಮಾರುತಿ ಪವಾರ, ಗಂಗಾಧರ ಹಬೀಬ, ಅಂಬಾಸಾ ಖಟವಟೆ, ಮೋತಿಲಾಲಸಾ ಪೂಜಾರಿ, ತರುಣ ಸಂಘದ ವಿಶ್ವನಾಥಸಾ ಸೂಳಂಕಿ, ಶ್ರೀನಿವಾಸ ಬಾಂಡಗೆ, ಶ್ರೀಕಾಂತ ಬಾಕಳೆ, ಮಾಧು ಬದಿ, ನಾಗರಾಜ ಖೋಡೆ, ಸುಧೀರ ಕಾಟಿಗರ, ಸಂದೀಪ ಕಬಾಡಿ, ಎಸ್‌ಎಸ್‌ಕೆ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಕಸ್ತೂರಿಬಾಯಿ ಬಾಂಡಗೆ, ಗೀತಾಬಾಯಿ ಹಬೀಬ ಮುಂತಾದವರು ಉಪಸ್ಥಿತರಿದ್ದರು.
ರಾಘು ಬಾರಡ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಪ್ರಕಾಶ ಬಾಕಳೆ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಮಾತನಾಡಿ, ನಮ್ಮೂರ ದಸರಾ ಕಾರ್ಯಕ್ರಮವನ್ನು ಸಮಾಜದ ಯುವಕರು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.


