ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತಿಯ PUC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಆಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ದ್ವಿತಿಯ ಪಿಯುಸಿ ಪರೀಕ್ಷೆಯು ಮಾರ್ಚ್ 2 ರಂದು ಪ್ರಾರಂಭವಾಗಿ ಮಾರ್ಚ್ 22ಕ್ಕೆ ಮುಗಿಯಲಿವೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗಳು ನಡೆಯಲಿವೆ.ಪಿಯುಸಿ ಪರೀಕ್ಷೆ ಮುಗಿದ 3ನೇ ದಿನಕ್ಕೆ SSLC ಪರೀಕ್ಷೆ ಆರಂಭವಾಗಲಿದೆ.
ಮಂಡಳಿ ರಿಲೀಸ್ ಮಾಡಿರುವ ಟೈಮ್ ಟೇಬಲ್ನಲ್ಲಿ ಮಾರ್ಚ್ 25 ರಂದು SSLC ಎಕ್ಸಾಂ ಪ್ರಾರಂಭವಾಗಿ ಏಪ್ರಿಲ್ 6 ಕ್ಕೆ ಕೊನೆ ಪರೀಕ್ಷೆ ನಡೆಯಲಿದೆ.ಸದ್ಯ ಬಿಡುಗಡೆ ಮಾಡಿರುವ ಟೈಮ್ ಟೇಬಲ್ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು 15 ದಿನಗಳ ಒಳಗೆ ಸಲ್ಲಿಸಬಹುದು. ಡಿಸೆಂಬರ್ 1 ರಿಂದ ಡಿಸೆಂಬರ್ 15ರ ಒಳಗೆ ಆಕ್ಷೇಪಣೆಗಳನ್ನು ಇ-ಮೇಲ್ ಮೂಲಕ ಸಲ್ಲಿಸಬಹುದು ಎಂದು ಮಂಡಳಿ ತಿಳಿಸಿದೆ.