ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು ಸಾಧನೆ

0
SSLC Exam
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹುಲಕೋಟಿಯ ಕೆ.ಎಚ್. ಪಾಟೀಲ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

Advertisement

ಆಸ್ಮಾ ಹರ್ಲಾಪೂರ ಶೇ. 96 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ಸ್ನೇಹಾ ಮಾಲಿಪಾಟೀಲ ಶೇ. 93.92 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಸಾವಿತ್ರಿ ಹೊಸಮನಿ ಶೇ. 91.84 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

SSLC Exam SSLC Exam

ಶೃತಿ ತೋರಗಲ್, ಭುವನೇಶ್ವರಿ ಹೊಂಬಳ, ವಿದ್ಯಾಶ್ರೀ ಲಕ್ಕನವರ, ಕವಿತಾ ಹಿತ್ತಬುಟ್ಟಿ, ಪೂಜಾ ಈರಗಾರ, ಮಧುಮತಿ ಬಿಸೇಬುದಿ, ಚನ್ನಮ್ಮ ಕೋಟಿ, ವೀಣಾ ಬಡಿಗೇರ, ಸೃಷ್ಟಿ ಕುಸಗಲ್, ಅಂಕಿತಾ ಜಾಧವ, ಭಾಗ್ಯಶ್ರೀ ಕರಿಗಾರ ಇವರೆಲ್ಲರೂ ಶೇ. ೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಕೆ.ಎಚ್. ಪಾಟೀಲ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಕೆ. ಪಾಟೀಲ ಹಾಗೂ ಗ್ರಾಮಸ್ಥರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಧಾ ಹಿರೇಮಠ, ಸದಸ್ಯರು, ಮುಖ್ಯೋಪಾಧ್ಯಾಯರಾದ ಎಫ್.ಎ. ಖಾನ್, ಎಲ್ಲಾ ಸಹ ಶಿಕ್ಷಕರು ಮತ್ತು ಸಿಬ್ಬಂದಿಯವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here