ಗದಗ: ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಭೀಷ್ಮ ಕೆರೆಯಲ್ಲಿ ನಡೆದಿದೆ. ಚಂದ್ರಿಕಾ ನಡುವಿನಮನಿ (21) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಮೂಲತಃ ಬಾಗಲಕೋಟೆ ಜಿಲ್ಲೆಯ ಶಿರೂರು ಮೂಲದ ಚಂದ್ರಿಕಾ ನಡುವಿನಮನಿ ಗದಗನ ಖಾಸಗಿ ಇಂಜನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದಳು.
ಇಂಜನಿಯರಿಂಗ್ ವ್ಯಾಸಂಗಕ್ಕಾಗಿ ಗದಗ ನಗರದಲ್ಲಿ ರೂಂ ಬಾಡಿಗೆ ಪಡೆದು ಗೆಳತಿಯರೊಂದಿಗೆ ವಾಸವಿದ್ದಳು. ಶನಿವಾರ ರಾತ್ರಿ 1.30 ರ ಸುಮಾರಿಗೆ ಕೊಠಡಿಯಿಂದ ಹೊರಹೋಗಿದ್ದ ವಿದ್ಯಾರ್ಥಿನಿ, ಇಂದು ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇನ್ನೂ ಮುದ್ದಿನ ತಂಗಿಯನ್ನು ಕಳೆದುಕೊಂಡ ಅಣ್ಣ ಕಣ್ಣೀರಿಟ್ಟಿದ್ದಾರೆ.
ನಿನ್ನೆ ರಾತ್ರಿ ಫೋನ್ ಮಾಡಿ ತಂಗಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಕಷ್ಟಪಟ್ಟು ಬೆಳೆಸಿದ್ದೇವು. ಎಸ್ಎಸ್ಎಲ್ಸಿಯಲ್ಲಿ ಊರಿಗೇ ಫಸ್ಟ್ ಬಂದಿದ್ಲು, ಪಿಯುಸಿಯಲ್ಲೂ ಒಳ್ಳೆಯ ರಿಸಲ್ಟ್ ಮಾಡಿದ್ಲು, ಆದ್ರೆ, ಇನ್ನೂ ಆರು ತಿಂಗಳಾಗಿದ್ರೆ ಇಂಜಿನೀಯರಿಂಗ್ ಮುಗಿತಿತ್ತು ಎಂದು ಬುದ್ಧಿ ಹೇಳಿ ತಪ್ಪಾಯ್ತು ಅಂತ ಕಣ್ಣೀರಿಟ್ಟಿದ್ದಾರೆ. ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಗದಗ ಶಹರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


