ವಾರ್ಡ್ ಸದಸ್ಯರಿಂದ ಅಭಿವೃದ್ಧಿಗೆ ಪಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ನಗರಸಭೆಯ ಕ್ರಿಯಾಶೀಲ ಸದಸ್ಯರಾದ ಶೈಲಾ ಬಾಕಳೆ ಅವರು 31ನೇ ವಾರ್ಡಿನ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಗದಗ-ಬೆಟಗೇರಿಯ 31ನೇ ವಾರ್ಡಿನ ತ್ರೀಕೂಟೇಶ್ವರ ದೇವಸ್ಥಾನದ ಆವರಣದಲ್ಲಿ, ಜೋಡ ಮಾರುತಿ ದೇವಸ್ಥಾನದ ಹತ್ತಿರ, ಕಿಲ್ಲಾ ಓಣಿ, ಭೀಷ್ಮ ಕೆರೆಯ ಸಮೀಪದ ಬನ್ನಿಕಟ್ಟಿ ದೇವಸ್ಥಾನ, ಗುಜ್ಜರಬಸ್ತಿಯಲ್ಲಿ ಅಳವಡಿಸಲಾಗಿರುವ ಒಟ್ಟು 5 ಮಿನಿ ಹೈಮಾಸ್ಟ್ ದೀಪಗಳನ್ನು ಹಾಗೂ ಹಸಿರು ಕೆರೆಯ ಹತ್ತಿರ ಒಂದು ಬೋರ್‌ವೆಲ್ ಉದ್ಘಾಟಿಸಿ ನಂತರ ತ್ರೀಕೂಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಬಿಜೆಪಿ ಹಿರಿಯರಾದ ಬಿ.ಎಚ್. ಲದ್ವಾ, ಜಗನ್ನಾಥಸಾ ಬಾಂಡಗೆ, ಲುಕ್ಕಣಸಾ ರಾಜೋಳಿ, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೂ ಖಾನಪ್ಪನವರ, ಶಹರ ಬಿಜೆಪಿ ಅಧ್ಯಕ್ಷ ಸುರೇಶ ಮರಳಪ್ಪನವರ, ಪರಶುರಾಮ ಬದಿ, ಮನ್ನು ದಲಬಂಜನ, ನಾಗರಾಜ ಖೋಡೆ, ರಾಜು ಕಾಟಿಗಾರ, ರಾಜೇಶ ಖೋಡೆ, ಪ್ರಕಾಶ ಕಾಟಿಗರ, ವೆಂಕಟೇಶ ಹಬೀಬ, ರವಿ ಚವ್ಹಾಣ, ಅರ್ಚಕ ಸಂಬಾಜಿ ಕಟ್ಟಿಮನಿ, ರುಕ್ಮಣಿ ಕಾಟಿಗಾರ ಸೇರಿದಂತೆ ವಾರ್ಡಿನ ಗುರು-ಹಿರಿಯರು ಉಪಸ್ಥಿತರಿದ್ದರು.

ಸುಧೀರ ಕಾಟಿಗಾರ ಸ್ವಾಗತಿಸಿದರು. ಶ್ರೀಕಾಂತ ಬಾಕಳೆ ನಿರೂಪಿಸಿದರು. ಪರಶುರಾಮ ಮಿಸ್ಕಿನ ವಂದಿಸಿದರು.

ಶೈಲಾ ಬಾಕಳೆಯವರು ತಮ್ಮ ವಾರ್ಡಿನಲ್ಲಿ ಹೈಮಾಸ್ಟ್ ದೀಪ, ರಸ್ತೆ, ಗಟಾರ ಮತ್ತು ಬೋರ್‌ವೆಲ್ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ವಾರ್ಡಿನ ಜನತೆಗೆ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಗಟಾರ, ಬೀದಿದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ಚುನಾವಣೆಯ ಸಂದರ್ಭದಲ್ಲಿ ಪ್ರಚಾರದ ಅಗತ್ಯವಿರುವದಿಲ್ಲ, ಪ್ರತಿಸ್ಪರ್ಧಿಯೂ ಇರುವದಿಲ್ಲ. ಅದ್ದರಿಂದ ಶೈಲಾ ಬಾಕಳೆಯವರ ಸಾಮಾಜಿಕ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಎಸ್.ವಿ. ಸಂಕನೂರ ಹಾರೈಸಿದರು.


Spread the love

LEAVE A REPLY

Please enter your comment!
Please enter your name here